Advertisement

ಫ್ರೆಂಚ್‌ ಅಧ್ಯಕ್ಷರೊಂದಿಗೆ ರಾಹುಲ್‌ ಭೇಟಿ, ರಾಫೇಲ್‌ ವಿಷಯ ಇಲ್ಲ

11:56 AM Mar 10, 2018 | udayavani editorial |

ಹೊಸದಿಲ್ಲಿ : ನಾಲ್ಕು ದಿನಗಳ ಭಾರತ ಭೇಟಿಗೆ ಬರಲಿರುವ ಫ್ರೆಂಚ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭೇಟಿಯಾಗಲಿದ್ದಾರೆ

Advertisement

ಸಾಗರೋತ್ತರ ಭಾರತೀಯರನ್ನು ತಲುಪುವ ಉದ್ದೇಶದೊಂದಿಗೆ ಕೈಗೊಂಡಿರುವ ಎರಡು ದಿನಗಳ ಥಾಯ್ಲಂಡ್‌ ಮತ್ತು ಸಿಂಗಾಪುರ ಭೇಟಿಯನ್ನು ಮುಗಿಸಿ ಬರುವ ರಾಹುಲ್‌ ಗಾಂಧಿ ಇದೇ ಭಾನುವಾರ ಫ್ರೆಂಚ್‌ ಅಧ್ಯಕ್ಷರನ್ನು ಭೇಟಿಯಾಗುವರೆಂದು ಮೂಲಗಳು ತಿಳಿಸಿವೆ. 

ಫ್ರೆಂಚ್‌ ಅಧ್ಯಕ್ಷರೊಂದಿಗೆ ಭೇಟಿಯ ವೇಳೆ ಭಾರತವು ಈಚೆಗೆ ಫ್ರಾನ್ಸ್‌ ಜತೆಗೆ ಅಂತಿಮಗೊಳಿಸಿರುವ ವಿವಾದಿತ ರಾಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದ ವಿಷಯವನ್ನು ಎತ್ತದಿರಲು ರಾಹುಲ್‌ ನಿರ್ಧರಿಸಿರುವುದಾಗಿಯೂ ವರದಿಯಾಗಿದೆ. 

11 ತಿಂಗಳ ಹಿಂದೆ ಕತಾರ್‌ ಮತ್ತು ಈಜಿಪ್ಟ್ ಗೆ ಮಾರಲಾದ ದರಕ್ಕಿಂತ 351 ಕೋಟಿ ರೂ ಹೆಚ್ಚು ದರಕ್ಕೆ ಫ್ರಾನ್ಸ್‌ ಭಾರತಕ್ಕೆ ರಾಫೇಲ್‌ ಯುದ್ಧ ವಿಮಾನಗಳನ್ನು ಮಾರಿದೆ ಎಂದು ಕಾಂಗ್ರೆಸ್‌ ಈ ಹಿಂದೆ ಆಪಾದಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next