Advertisement

ರಾಮ ಮಂದಿರಕ್ಕೆ ಸಂಸತ್‌ –ರಾಹುಲ್‌ ಬೆಂಬಲ: ಪೇಜಾವರ ಶ್ರೀ ಆಶಯ

09:48 AM Jun 01, 2019 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಂಸತ್‌ ಅನುಮೋದನೆ ನೀಡಬೇಕು. ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬೆಂಬಲ ಕೊಡಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.

Advertisement

ಉಡುಪಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆಯಾದರೂ ಸಂಸತ್ತೇ ಎಲ್ಲಕ್ಕಿಂತ ಮಿಗಿಲು. ಅಲ್ಲಿ ಪ್ರಧಾನಿ ಮೋದಿಯವರು ಇದಕ್ಕೆ ಅವ ಕಾಶ ಕೊಡಬೇಕು, ರಾಹುಲ್‌ ಅವರು ಬೆಂಬಲಿಸಬೇಕು ಎಂದರು.

ಬಿಜೆಪಿ ಗೆಲುವು ಏಕಾಯಿತು?
ಚುನಾವಣೆ ಕುರಿತು ಕೇಳಿದಾಗ, ಬೇರೆ ಪಕ್ಷಗಳು ಬಿಜೆಪಿಯನ್ನು ಕೋಮುವಾದಿ ಎಂದು ಬಿಂಬಿಸಲು ಯತ್ನಿಸಿದವು. ವಾಸ್ತವದಲ್ಲಿ ಎಲ್ಲ ಪಕ್ಷಗಳು ತಮ್ಮ ಯೋಜನೆ, ಅಭಿವೃದ್ಧಿ ಕುರಿತು ಚುನಾವಣೆ ಪ್ರಚಾರ ನಡೆಸ ಬೇಕಿತ್ತು. ಇದರಿಂದ ಹಿಂದೂಗಳಲ್ಲಿ ಹಿಂದುತ್ವದ ಜಾಗೃತವಾಗಿ ಒಂದೇ ಪಕ್ಷ ಹೆಚ್ಚು ಸ್ಥಾನ ಗಳಿಸುವಂತಾಯಿತು ಎಂದರು.

ಆದ್ಯತೆಗಳೇನಾಗಬೇಕು?
ಪ್ರಮಾಣವಚನ ಸಮಾರಂಭದ ಬಗ್ಗೆ ಕೇಳಿದಾಗ ಶಿಸ್ತುಬದ್ಧವಾಗಿತ್ತು, ಗಂಭೀರವಾಗಿತ್ತು. ಜನರ ಉತ್ಸಾಹವೂ ಹೆಚ್ಚು ಇತ್ತು ಎಂದರು. ಅಭಿವೃದ್ಧಿ, ರಕ್ಷಣೆ, ಕಾಶ್ಮೀರ ಸಮಸ್ಯೆ ನಿವಾರಣೆ, ಉದ್ಯೋಗ ಸೃಷ್ಟಿ, ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾ ಹಗಳು ಆದ್ಯತೆಗಳಾಗಬೇಕು ಎಂದರು.

ರಾಷ್ಟ್ರಪಿತ-ರಾಷ್ಟ್ರಪುತ್ರ
ಧಾರವಾಡದಲ್ಲಿ “ವೇದವ್ಯಾಸರು ರಾಷ್ಟ್ರಪಿತ’ ಎಂದು ಹೇಳಿದ್ದೀರಲ್ಲ ಎಂದು ಕೇಳಿದಾಗ, ಭಾರತವು ಗಾಂಧೀಜಿಯವರಿಂದ ಪ್ರಾರಂಭ ಆದದ್ದಲ್ಲ. ವೇದವ್ಯಾಸರು ಸರ್ವ ವಾಯವನ್ನು ಆವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ ರಾಷ್ಟ್ರೀಯತ್ವ ಎಲ್ಲವೂ ಜಾಗೃತವಾಗಿವೆ. ಈ ದೃಷ್ಟಿಯಲ್ಲಿ ವೇದವ್ಯಾಸರೇ ರಾಷ್ಟ್ರಪಿತರು. ಮಹಾತ್ಮಾ ಗಾಂಧಿಯವರ ಬಗ್ಗೆ ನನಗೆ ಬಹಳ ಗೌರವ ಇದೆ. ನಾಥು ರಾಮ್‌ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದು ಹೇಳುವವರ ಬಗ್ಗೆ ನನಗೆ ಅಸಮಾ ಧಾನ ಇದೆ. ಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರು, ವೇದವ್ಯಾಸರು ರಾಷ್ಟ್ರಪಿತರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next