Advertisement

Match-fixing ಮಾಡಿಕೊಳ್ಳದೆ ಬಿಜೆಪಿಗೆ 400 ಸ್ಥಾನ ದಾಟುವುದು ಅಸಾಧ್ಯ: ರಾಹುಲ್ ಗಾಂಧಿ

04:14 PM Mar 31, 2024 | Team Udayavani |

ಹೊಸದಿಲ್ಲಿ: ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳದೆ 400 ಸ್ಥಾನ ದಾಟುವ ಬಿಜೆಪಿ ಘೋಷಣೆ ಈಡೇರಲು ಸಾಧ್ಯವಿಲ್ಲ “400 ಪಾರ್” ಆಗಲು ಪ್ರಧಾನಿ “ಅಂಪೈರ್” ಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಪ್ ಇಂಡಿಯಾ ಮೈತ್ರಿಕೂಟದ ಉನ್ನತ ನಾಯಕರು ದೆಹಲಿಯಲ್ಲಿ ಕರೆ ನೀಡಿದ್ದ ‘ಲೋಕತಂತ್ರ ಬಚಾವೋ’ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದರು. “ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳ ಮೇಲೆ ಒತ್ತಡವಿಲ್ಲದೆ ಬಿಜೆಪಿ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ” ಎಂದರು.

“ಐಪಿಎಲ್ ಪಂದ್ಯಗಳು ನಡೆಯುತ್ತಿವೆ, ಅಂಪೈರ್‌ಗಳಿಗೆ ಒತ್ತಡ ಹೇರಿದಾಗ ಆಟಗಾರರನ್ನು ಖರೀದಿಸಿದಾಗ ಮತ್ತು ನಾಯಕ ಪಂದ್ಯಗಳನ್ನು ಗೆಲ್ಲಿಸಲು ಬೆದರಿಕೆ ಹಾಕಿದಾಗ ಅದನ್ನು ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ, ಅಂಪೈರ್‌ಗಳನ್ನು ಆಯ್ಕೆ ಮಾಡಿದ್ದು ಪ್ರಧಾನಿ ಮೋದಿ. ನಮ್ಮ ತಂಡದ ಎರಡು ಪ್ರಮುಖ ಆಟಗಾರರನ್ನು ಪಂದ್ಯಕ್ಕೂ ಮುನ್ನ ಬಂಧಿಸಲಾಗಿದೆ’ ಎಂದರು.

ಕಾಂಗ್ರೆಸ್ ಅತಿದೊಡ್ಡ ವಿಪಕ್ಷವಾಗಿದ್ದು, ಚುನಾವಣೆಯ ಮಧ್ಯದಲ್ಲಿ ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗಿದೆ. ನಾವು ಪ್ರಚಾರಗಳನ್ನು ನಡೆಸಬೇಕು, ರಾಜ್ಯಗಳಿಗೆ ಕಾರ್ಯಕರ್ತರನ್ನು ಕಳುಹಿಸಬೇಕು, ಪೋಸ್ಟರ್‌ಗಳನ್ನು ಹಾಕಬೇಕು, ಆದರೆ ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗಿದೆ. ಇದು ಯಾವ ರೀತಿಯ ಚುನಾವಣೆ’’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next