Advertisement

ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ: ರಾಹುಲ್‌ ಗಾಂಧಿ ಆಶ್ವಾಸನೆ

06:48 AM Mar 14, 2019 | Team Udayavani |

ತೃಶ್ಶೂರು, ಕೇರಳ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಬಂದರೆ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

Advertisement

ಅಖೀಲ ಭಾರತ ಮೀನುಗಾರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಾಹುಲ್‌ ಗಾಂಧಿ, “ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹಾಗೆ ಸುಳ್ಳು ಭರವಸೆಗಳನ್ನು ನೀಡುವವನಲ್ಲ’ ಎಂದು ಹೇಳಿಕೊಂಡರು. 

“ದಯವಿಟ್ಟು ನನ್ನ ಭಾಷಣಗಳನ್ನು ಗಮನಿಸಿ ನೋಡಿ; ನಾನು ಏನನ್ನಾದರೂ ಹೇಳಿದರೆ ಅದನ್ನು ದೃಢ ಸಂಕಲ್ಪದಿಂದ ಹೇಳಿರುತ್ತೇನೆ’ ಎಂದ ರಾಹುಲ್‌, ತಾನು ನುಡಿದಂತೆ ನಡೆಯುವ ನಾಯಕ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next