Advertisement

ಸಿಎಂ ಹುದ್ದೆಯಲ್ಲೂ ಶೇ.50 ಮೀಸಲಾತಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌

08:05 AM Oct 26, 2018 | Team Udayavani |

ಹೊಸದಿಲ್ಲಿ: ಮುಂದಿನ 5ರಿಂದ 7 ವರ್ಷಗಳಲ್ಲಿ ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಶೇ.50ರಷ್ಟು ಮಹಿಳಾ ಮುಖ್ಯಮಂತ್ರಿಗಳಿರಬೇಕು ಎಂದು ನಾನು ಬಯಸುತ್ತೇನೆ’. ಹೀಗೆಂದು ಹೇಳಿರುವುದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಗುರುವಾರ ರಾಜಸ್ಥಾನದ ಕೋಟಾದಲ್ಲಿ ರಾಜ್ಯ ಮಟ್ಟದ ಮಹಿಳಾ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮಹಿಳೆಯರು ಪ್ರಗತಿಪರರಾಗಿರಬಾರದು, ಅವರು ಮನೆಯಿಂದ ಹೊರಬರಬಾರದು ಎಂದು ಬಿಜೆಪಿ ಬಯಸುತ್ತದೆ. ಆರೆಸ್ಸೆಸ್‌ ಸಭೆಗಳಲ್ಲಿ ಒಬ್ಬ ಮಹಿಳೆಯೂ ನಿಮಗೆ ಕಾಣಸಿಗುವುದಿಲ್ಲ. ಬಿಜೆಪಿಯಲ್ಲಿ ಮಹಿಳಾ ಸಂಘಟನೆಗಳಿವೆ. ಆದರೆ, ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಅಲ್ಲಿರುವ ಮಹಿಳೆಯರಿಗೆ ಇರುವುದಿಲ್ಲ. ಆದರೆ, ಕಾಂಗ್ರೆಸ್‌ ಮಹಿಳೆಯರ ಸಬಲೀಕರಣದಲ್ಲಿ ನಂಬಿಕೆಯಿಟ್ಟಿದೆ. ಜಿಲ್ಲಾ ಪರಿಷತ್‌ನಿಂದ ಹಿಡಿದು, ಶಾಸಕ, ಸಂಸದ ಸ್ಥಾನದವರೆಗೂ ಮಹಿಳೆಯರಿಗೆ ನಾವು ಉತ್ತೇಜನ ನೀಡುತ್ತೇವೆ. 5-7 ವರ್ಷಗಳಲ್ಲಿ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳಲ್ಲಿ ಮಹಿಳೆಯರೇ ಸಿಎಂ ಆಗಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ.

Advertisement

ಏತನ್ಮಧ್ಯೆ, ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಲವು ಹಾಲಿ ಶಾಸಕರ ಹೆಸರನ್ನು ಬಿಜೆಪಿ ಕೈಬಿಟ್ಟಿರುವುದರ ಬಿಸಿ ರಾಜಸ್ಥಾನದ ಶಾಸಕರಿಗೂ ತಟ್ಟತೊಡಗಿದೆ. ರಾಜಸ್ಥಾನದಲ್ಲೂ ಹಲವು ಶಾಸಕರ ಹೆಸರನ್ನು ಕೈಬಿಟ್ಟರೆ ಹೇಗೆ ಎಂಬ ಆತಂಕದಲ್ಲಿ ಶಾಸಕರಿದ್ದಾರೆ. 80 ಮಂದಿ ಶಾಸಕರಿಗೆ ಟಿಕೆಟ್‌ ನೀಡದೇ ಇರಲು ಪಕ್ಷ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದೂ ಇವರ ಆತಂಕ ಹೆಚ್ಚಲು ಕಾರಣ.

ರಾಜೀನಾಮೆ ವಾಪಸ್‌: ಅಸ್ಸಾಂನಲ್ಲಿ 2 ದಿನಗಳ ಹಿಂದಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ಶಾಸಕ ತೆರಾಶ್‌ ಗೊವಲ್ಲಾ, ಗುರುವಾರ ರಾಜೀನಾಮೆ ವಾಪಸ್‌ ಪಡೆದಿದ್ದಾರೆ. ನನ್ನ ಕಳವಳಗಳಿಗೆ ಸಿಎಂ ಸೊನೊವಾಲ್‌ ಸ್ಪಂದಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next