ಜೈಪುರ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಗುರುವಾರ ಗ್ಯಾಂಗ್ ರೇಪ್ ಗೆ ಗುರಿಯಾಗಿದ್ದ ದಲಿತ ಮಹಿಳೆಯನ್ನು ಭೇಟಿಯಾಗಿ ಸಮಾಧಾನ ಹೇಳಿದರು.
ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯ ಮಂತ್ರಿ ಅಶೋಕ್ ಗೆಹಲೋಟ್, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರೂ ಇದ್ದರು. ರಾಹುಲ್ ಅವರು ನಿನ್ನೆ ಬುಧವಾರವೇ ಇಲ್ಲಿಗೆ ಬರುವವರಿದ್ದರು.
ಕಳೆದ ಎ.26ರಂದು ಆರು ಕಾಮಾಂಧರು ದಲಿತ ಮಹಿಳೆಯನ್ನು ಆಕೆಯ ಪತಿಯ ಸಮ್ಮುಖದಲ್ಲೇ ಥಾನಾಗಾಜಿ-ಅಲ್ವಾರ್ ಬೈಪಾಸ್ ಸಮೀಪ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಕಳೆದ ಮೇ 2ರಂದು ಈ ಪ್ರಕರಣದ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಮೇ 4ರಂದು ಅತ್ಯಾಚಾರದ ಓರ್ವ ಆರೋಪಿ ಅಪರಾಧದ ವಿಡಿಯೋ ಚಿತ್ರಿಕೆಯನ್ನು ಹಂಚಿಕೊಂಡಿದ್ದ .
ಅನಂತರದಲ್ಲಿ ಪೊಲೀಸರು ಐವರು ಆರೋಪಿಗಳು ಮತ್ತು ಗುಂಡೆಸೆದ ಮತ್ತು ವಿಡಿಯೋ ಹಂಚಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿದಿದ್ದರು.