Advertisement
ದಿಯೋಘರ್ ಜಿಲ್ಲೆಯ ಮಧುಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ‘ಜಾರ್ಖಂಡ್ ಚುನಾವಣೆ ಶಾಸಕರು, ಮುಖ್ಯಮಂತ್ರಿ ಅಥವಾ ಸರ್ಕಾರವನ್ನು ಬದಲಾಯಿಸಲು ಅಲ್ಲ, ಆದರೆ ಯುವಕರು ಮತ್ತು ಬಡವರ ಭವಿಷ್ಯವನ್ನು ರೂಪಿಸಲು ಮತ್ತು ಭ್ರಷ್ಟಾಚಾರವನ್ನು ತಡೆಯಲು’ ಎಂದರು.
Related Articles
Advertisement
ದುಮ್ಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ‘ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕಾಂಗ್ರೆಸ್ ನೆರವಿನೊಂದಿಗೆ ಹಿಂಬಾಗಿಲ ಮೂಲಕ ಮುಸ್ಲಿಮರಿಗೆ ಮೀಸಲಾತಿ ನೀಡಲು ಪಿತೂರಿ ನಡೆಸುತ್ತಿದ್ದಾರೆ. ಅಂತಹ ಯಾವುದೇ ಪ್ರಯತ್ನವನ್ನು ಬಿಜೆಪಿ ವಿಫಲಗೊಳಿಸುತ್ತದೆ’ ಎಂದು ಶಾ ವಾಗ್ದಾಳಿ ನಡೆಸಿದರು.
ಕ್ಷೀಣಿಸುತ್ತಿರುವ ಬುಡಕಟ್ಟು ಜನಸಂಖ್ಯೆಗೆ ಸೊರೇನ್ ಜವಾಬ್ದಾರರು ಎಂದು ಕಿಡಿ ಕಾರಿದರು. ‘ಡಿಸೆಂಬರ್ 2027 ರ ಮೊದಲು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದು ಶಾ ಪ್ರತಿಪಾದಿಸಿದರು.