ಹೊಸದಿಲ್ಲಿ : ”ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಓರ್ವ ಕ್ರೈಸ್ತ, ಆತನ 10 ಜನಪಥ ನಿವಾಸದಲ್ಲಿ ಚರ್ಚ್ ಇದೆ” ಎಂದು ವಿವಾದಾತ್ಮಕ ಹೇಳಿಕೆಗಳ ಸರದಾರ, ಬಿಜೆಪಿ ರಾಜ್ಯಸಭಾ ಸದಸ್ಯ, ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ಹಿಂದೂ ದೇವಾಲಯಗಳಿಗೆ ಒಂದರ ಬಳಿಕ ಒಂದರಂತೆ ಭೇಟಿ ಕೊಡುತ್ತಿರುವ ರಾಹುಲ್ ಗಾಂಧಿ, ತಾನು ಹಿಂದೂ ಎನ್ನುವುದನ್ನು ಮೊತ್ತ ಮೊದಲಾಗಿ ಘೋಷಿಸಿಕೊಳ್ಳಬೇಕು ಎಂದು ಸ್ವಾಮಿ ಸವಾಲೊಡ್ಡಿದ್ದಾರೆ.
ಕಾಂಗ್ರೆಸ್ ನ ನಂಬರ್ 2 ಆಗಿರುವ ರಾಹುಲ್ ಗಾಂಧಿ ಓರ್ವ ಕ್ರೈಸ್ತನೆಂದು ನಾನು ಶಂಕಿಸುತ್ತೇನೆ ಮತ್ತು ಆತನ 10 ಜನಪಥ್ ನಿವಾಸದೊಳಗೆ ಚರ್ಚ್ ಇರಬಹುದೆಂದೂ ಶಂಕಿಸುತ್ತೇನೆ ಎಂಬುದಾಗಿ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ಆಡಳಿತೆ ಇರುವ ಗುಜರಾತ್‌ನಲ್ಲಿ ರಾಹುಲ್ ಗಾಂಧಿ ದೇವಾಲಯಗಳನ್ನು ಸಂದರ್ಶಿಸುವುದು ಏಕೆಂದರೆ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬ ಜನರಲ್ಲಿ ಇರುವುದನ್ನು ತೊಡೆದು ಹಾಕುವ ಸಲುವಾಗಿ ಎಂದು ಸ್ವಾಮಿ ಟೀಕಿಸಿದರು. ಬಿಜೆಪಿ, ಆರ್‌ಎಸ್‌ಎಸ್ ನ ಹಿಂದುತ್ವದ ಅಭಿಯಾನಕ್ಕೆ ಸೆಡ್ಡು ಹೊಡೆಯುವ ಹತಾಶೆಯಲ್ಲಿ ರಾಹುಲ್ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದರು.
ರಾಹುಲ್ ಗಾಂಧಿ ಕಳೆದ ಸೋಮವಾರ ಗುಜರಾತ್‌ನ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ಕೊಡುವ ಮೂಲಕ ರಾಜ್ಯದಲ್ಲಿನ ಹಿಂದೂ ದೇವಾಲಯ ದರ್ಶನಕ್ಕೆ ಚಾಲನೆ ನೀಡಿದ್ದರು. ಅನಂತರದಲ್ಲಿ ರಾಹುಲ್, ಸುರೇಂದ್ರನಗರ ಜಿಲ್ಲೆಯಲ್ಲಿನ ಛೋಟಿಲಾ ದೇವಳ, ಕಾಗವಾಡ ಗ್ರಾಮದಲ್ಲಿನ ಖೋದಾಲ ಧಾಮ ದೇವಸ್ಥಾನ, ರಾಜ್‌ಕೋಟ್ ಜಿಲ್ಲೆಯಲ್ಲಿನ ವೀರಪುರದಲ್ಲಿರುವ ಜಲರಾಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.