Advertisement

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

03:38 PM Apr 26, 2024 | Team Udayavani |

ವಿಜಯಪುರ : ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರೈತರ ಸಾಲಮನ್ನಾ ಮಾಡುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ತಪ್ಪು ಜಿ.ಎಸ್.ಟಿ. ಹಾಗೂ ಸೇನೆಯನ್ನು ದುರ್ಬಲಗೊಳಿಸಿರುವ ಅಗ್ನಿವೀರ ಯೋಜನೆಯನ್ನು ರದ್ದು ಮಾಡುವುದಾಗಿ ರಾಹುಲ್ ಗಾಂಧಿ ಘೋಷಿಸಿದರು.

Advertisement

ಶುಕ್ರವಾರ ವಿಜಯಪುರ ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಿಂದಲೇ ಜನರಿಗೆ ಎಲ್ಲ ಹಕ್ಕುಗಳು ಸಿಕ್ಕಿವೆ. ಇದಕ್ಕೂ ಮುನ್ನ ರಾಜ- ಮಹಾರಾಜರ ಆಡಳಿತವಿತ್ತು. ಇಂದು ಬಡವರ ಬಳಿ ದಲಿತರ ಬಳಿ ಆದಿವಾಸಿಗಳ ಬಳಿ ಆಧಿಕಾರ ಧ್ವನಿ ಇದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ ಎಂದರು.

ಒಂದು ಕಡೆ ನರೇಂದ್ರ ಮೋದಿ ಸಂವಿಧಾನವನ್ನು ಕೊನೆಗಾಣಿಸಲು ಹೊರಟಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಾಯಿಸು, ನಾಶ ಮಾಡುವ ಮಾತನಾಡುತ್ತಿದ್ದಾರೆ. ಮೋದಿ ಅವರು ಮತ್ತೆ ಆಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ. ಒಂದು ಕಡೆ ಬಿಜೆಪಿ-ಮೋದಿ ಮತ್ತೊಂದೆಡೆ ನಮ್ಮ ಕಾಂಗ್ರೆಸ್ ಪಕ್ಷ ಸಹಿತ ಇಂಡಿಯಾ ಮೈತ್ರಿ ಕೂಟ ಇದೆ. ನರೇಂದ್ರ ಮೋದಿ ಕಳೆದ 10 ವರ್ಷದಲ್ಲಿ 20-25 ಜನರನ್ನು ಕೋಟ್ಯಾಧಿಪತಿ ಮಾಡಿದ್ದಾರೆ. ಭಾರತದ ದೇಶದ ಸಂಪತ್ತು ಅದಾನಿ ಅವರಂಥ ಕೆಲವೇ ಕೆಲವರ ಬಳಿ ಇದೆ. ದೇಶದ ಸಾರ್ವಜನಿಕ ಆಸ್ತಿಯನ್ನು ವಿಮಾನ ನಿಲ್ದಾಣ, ಸೌರಶಕ್ತಿ ಯೋಜನೆಗಳ ಮೂಲಕ ನೀಡಿದ್ದಾರೆ. ಮೋದಿ ಅವರ ಆಡಳಿತದಲ್ಲಿ ಬಡವರಿಗೆ ಏನೂ ಕೂಡಾ ಸಿಕ್ಕಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೆವೆ. ಇದರಿಂದ ಬಡವರಿಗೆ ಅನಕೂಲವಾಗಿದೆ. ನೀವು ಚಪ್ಪಾಳೆ ತಟ್ಟುತ್ತಿದ್ದೀರಿ ಇದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಎಂಬುದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವ ನಿಧಿ ಐದು ಗ್ಯಾರಂಟಿಗಳು ಬಡ ಜನರಿಗೆ ಅನುಕೂಲ ಆಗಿವೆ. ಬಿಜೆಪಿ ಸರ್ಕಾರ 25 ಜನರನ್ನು ಕೋಟ್ಯಾಧೀಶವರನ್ನ ಹುಟ್ಟು ಹಾಕಿದದ್ದೇ ಸಾಧನೆ. ನಮ್ಮ ಸರ್ಕಾರ ದೇಶದ ಕೋಟಿ ಕೋಟಿ ಬಡವರನ್ನು ಲಕ್ ಪತಿಗಳನ್ನಾಗಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಭರವಸೆ ನೀಡಿದರು.

Advertisement

ನರೇಂದ್ರ ಮೋದಿ ಶ್ರೀಮಂತರಿಗೆ ನೀಡಿರುವ ಹೆಣವನ್ನು ನಾವು ಬಡವರಿಗೆ, ರೈತರಿಗೆ, ಯುವಕರಿಗೆ ನೀಡುತ್ತೇವೆ ಎಂದು ಘೋಷಿಸಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗುತ್ತದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಕರ್ನಾಟಕ ದಿವಾಳಿ ಆಗಿದೆಯಾ ಎಂಬುದನ್ನು ಪ್ರಧಾನಿ ಮೋದಿ ತಿಳಿದುಕೊಳ್ಳಿ ಎಂದು ಕುಟುಕಿದರು.

ಕರ್ನಾಕಟದ ಪ್ರತಿ ಕುಟುಂಬದ ಮಹಿಳೆಯರಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಸಿಗುತ್ತಿದೆ. ಇದರಿಂದ ಕರ್ನಾಟಕದ 1 ಕೋಟಿ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ಸಿಗುತ್ತಿದೆ. ಮಹಿಳೆಯರಿಗೆ ಹಣ ಕೊಡುವುದರಿಂದ ಅವರು ದೇಶದ ಕುಟುಂಬದ ರಕ್ಷಣೆ ಮಾಡುತ್ತಾರೆ.

ಮಹಿಳೆಯರು ಹೊರಗೆ 8 ಗಂಟೆ ಕೆಲಸ ಮಾಡಿ ಬಂದ ಮೆಲೆಯೂ ಮನೆಯಲ್ಲಿ ಮಕ್ಕಳ ಪಾಲನೆ ಹಾಗೂ ಇತರೆ ಕೆಲಸ ಅಂತೆಲ್ಲ ಮತ್ತೆ 8 ಗಂಟೆ ಕೆಲಸ ಮಾಡುತ್ತಾಳೆ. ಇದಕ್ಕಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದೇವೆ ಎಂದು ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ಸಮರ್ಥಿಸಿದರು.

ಇಷ್ಟು ಮಾತ್ರವಲ್ಲದೇ ಇನ್ನೂ ನಾನು ಹೇಳುವುದನ್ನು ಕೇಳಿದರೆ ನೀವೆಲ್ಲ ಇನ್ನೂ ಜೋರಾಗಿ ಚಪ್ಪಾಳೆ ತಟ್ಟುತ್ತೀರಿ. ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಆಧಿಕಾರಕ್ಕೆ ಬರುತ್ತದೆ. ದೇಶದ ಎಲ್ಲ ಬಡ ಮಹಿಳೆಯರು ಮಾಹಿತಿ ಸಂಗ್ರಹ ಮಾಡುತ್ತೇವೆ. ಒಂದು ಬಡ ಕುಟುಂಬದ ಓರ್ವ ಮಹಿಳೆಯನ್ನು ಆಯ್ಕೆ ಮಾಡಿ, ಆಕೆಗೆ ನಮ್ಮ ಸರ್ಕಾರ ವರ್ಷಕ್ಕೆ 1 ಲಕ್ಷ ರೂ. ಹಣವನ್ನು ಪ್ರತಿ ತಿಂಗಳು 1ನೇ ತಾರೀಖಿನಂದು ಠಕಾಟಕ್, ಠಕಾಟಕ್ ಎಂದು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತೇವೆ. ಇದು ಕರ್ನಾಟಕದಲ್ಲಿ ನಮ್ಮ ಸರ್ಕಾರ ಕೊಡುತ್ತಿರುವ 24 ಸಾವಿರ ರೂ. ಹಾಕಿದರೆ, ಕೇಂದ್ರದ ನಮ್ಮ ಸರ್ಕಾರ 1 ಲಕ್ಷ ರೂ. ಕೊಡುತ್ತದೆ. ಇದರಿಂದ
ಪ್ರತಿ ತಿಂಗಳು10, 500 ಠಕಾಟಕ್ ಠಕಾಟಕ್ ಎಂದು ಬ್ಯಾಂಕ್ ಅಕೌಂಟ್ ಗೆ ಹಣ ಜಮೆ ಆಗಲಿದೆ ಎಂದರು.

ಎಲ್ಲಿ ವರೆಗೆ ಬಡತನದಿಂದ ಜನರು ಹೊರ ಬರಲು ಆಗಲ್ಲವೋ ಅಲ್ಲಿ ವರೆಗೂ 10,500 ರೂ. ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

ಕರ್ನಾಟಕದ ಯುವ ನಿಧಿಯಲ್ಲಿ ನಿರುದ್ಯೋಗಿ ಪದವಿ ಯುವಕರಿಗೆ 3000 ರೂ. ಹಣ ನೀಡಲಾಗುತ್ತದೆ. ಶ್ರೀಮಂತರ ಪರ ಇರುವ ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ನಿರ್ಲಕ್ಷ್ಯ ಮಾಡಿದ್ದಾರೆ. ಮೋದಿ ಸರ್ಕಾರ ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಏನೂ ಮಾಡ ಕಾರಣ ವಿದ್ಯಾವಂತ ಪದವೀಧರರು ಉದ್ಯೋಗ ಅರಸುತ್ತಾ, ಕೆಲಸ ಕೊಡಿ ಎಂದು ಅಂಗಲಾಚುತ್ತಾ ಅಲೆಯುವ ದುಸ್ಥಿತಿ ನಿರ್ಮಿಸಿದ್ದಾರೆ.

ಇಂಡಿಯಾ ಒಕ್ಕೂಟದ ಸರ್ಕಾರ ಜಗತ್ತಿನ ಮೊದಲ ಸರ್ಕಾರವಾಗಲಿದೆ. ಬಡ ಯುವಕರಿಗೆ ಹಣ ನೀಡಲಿದೆ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭತವಸೆ ನೀಡಿದರು.

ಖಾಸಗಿ, ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಉದ್ದಿಮೆಗಳಲ್ಲಿ ಯುವಕರಿಗೆ ಉದ್ಯೋಗ ನೀಡುತ್ತದೆ. ಡಿಪ್ಲೋಮಾ, ಸ್ನಾತಕೋತ್ತರ ಪದವೀಧರ ಎಲ್ಲರಿಗೂ ಸರ್ಕಾರ ಒಂದು ವರ್ಷದಲ್ಲಿ ಉದ್ಯೋಗ ನೀಡಲಿದೆ.
ಮನರೇಗಾ ಮಾದರಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ನೀಡುತ್ತೇವೆ ಎಂದರು.

8500 ಹಣ ಬ್ಯಾಂಕ್ ಅಕೌಂಟಗ ಮೂಲಕ ಯುವಕ ಅಕೌಂಟಿಗೆ ಹಣ ಹಾಕಲಾಗುತ್ತದೆ. ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡಲಿಲ್ಲ,
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಿಲ್ಲ. ನಮ್ಮ ಸರ್ಕಾರ ಆಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡುತ್ತೇವೆ,
ಬೆಳೆಗಳಿಗೆ ಎಂ.ಎಸ್.ಪಿ. ನಿಗದಿ ಮಾಡುತ್ತೇವೆ ಎಂದರು.

ಆಶಾ, ಆಂಗನವಾಡಿ, ಕಾರ್ಯಕರ್ತೆಯರಿಗೆ ಎರಡು ಪಟ್ಟು ಸಂಬಳ ನೀಡುತ್ತೇವೆ. ಮನರೇಗಾ ಯೋಜನೆಯಲ್ಲಿ ದುಡಿಯುವವರಿಗೆ ನಿತ್ಯ 400 ರೂ. ಸಂಬಳ ನೀಡುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ದೇಶದ ಯುವಕರಿಗೆ ಅನಕೂಲವಾಗಿಲ್ಲ. ಅಗ್ನಿಪಥ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದರು.

ಇದಲ್ಲದೆ ಮೋದಿ ಅವರು ತಪ್ಪಾದ ಐದು ಜಿ.ಎಸ್.ಟಿ ವ್ಯವಸ್ಥ ಜಾರಿ ಮಾಡಿದ್ದಾರೆ. ಕರ್ನಾಟಕದ ಜನರಿಗೆ ಗೊತ್ತು 100 ರೂ. ಹಣ ನೀಡಿದರೆ 13 ರೂ. ವಾಪಸ್ ಬರುತ್ತಿದೆ. ಇದರೊಂದಿಗೆ ರಾಜ್ಯದ ಜನರಿಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ, ಈ ಅನ್ಯಾಯ ಸರಿಪಡಿಸಲು ನಾವು ಜಿ.ಎಸ್.ಟಿ. ರದ್ದು ಮಾಡುತ್ತೇವೆ ಎಂದರು.

ಮೋದಿ ಅವರ ಭಾಷಣ ನೀವು ಕೇಳುತ್ತಿದ್ದೀರಿ, ಅವರು ಗಾಬರಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ವೇದಿಕೆ ಮೇಲೆ ಬಂದು ಕಣ್ಣೀರು ಹಾಕಲಿದ್ದಾರೆ ಎಂದು ಎಂದು ಲೇವಡಿ ಮಾಡಿದರು‌.

ಮೋದಿ 10 ವರ್ಷದಲ್ಲಿ ಕೇವಲ ಬಡವರ ಹಣ ಕಿತ್ತುಕೊಂಡಿದ್ದಾರೆ. ಕೆಲವನ್ನು ಅರಬ್ ಪತಿ ಮಾಡಿದ್ದಾರೆ ಅವರ ಬಳಿ ಬಳಿ ಇದ್ದ ಹಣ ಶೇ. 75 ರಷ್ಟು ಬಡವರಿ ಬಳಿ ಇದ್ದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ಟೀಕಿಸಿದರು.

ಬಡವರು, ಅಲ್ಪಸಂಖ್ಯಾತರು, ಹಿಂದುಗಳಿದ, ದಲಿತರು, ಆದಿವಾಸಿಗಳಿಗೆ ಜಾಗವಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ ಬಡವರಣ ಹಣವನ್ನು ಮೊದಿ ಅವರು ಶ್ರೀಮಂತರಿಗೆ ನೀಡಿದ್ದಾರೆ. ಅವರು ಶ್ರೀಮಂತರಿಗೆ ನೀಡಿರುವ ಅಷ್ಟೂ ಹಣವನ್ನು ನಾವು ಬಡವರಿಗೆ ನೀಡುತ್ತೇವೆ. ಹೀಗಾಗಿ ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದರು.

ಹೃದಯದ ಅಂತರಾಳದಿಂದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಕಾರ್ಯಕರ್ತರು ಹುಲಿ, ಸಿಂಹ ಇದ್ದಂತೆ ಇದ್ದೀರಿ. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ಪ್ರಕಾಶ ರಾಠೋಡ, ಸುನಿಲಗೌಡ ಪಾಟೀಲ ಇತರರು ವೇದಿಕೆ ಮೇಲಿದ್ದರು‌.

Advertisement

Udayavani is now on Telegram. Click here to join our channel and stay updated with the latest news.

Next