Advertisement

ವಿದ್ಯಾರ್ಥಿನಿಯರೊಂದಿಗೆ ಸಂವಾದ:ರಾಹುಲ್‌ ಅಂತಾ ಕರೀರಿ…ಸರ್‌ ಬೇಡ!

11:29 AM Mar 24, 2018 | Team Udayavani |

ಮೈಸೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ನಗರದ ಮಹಾರಾಣಿ ಕಾಲೇಜಿನಲ್ಲಿ  ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. 

Advertisement

ವಿದ್ಯಾರ್ಥಿನಿಯೊಬ್ಬಳು ರಾಹುಲ್‌ ಸರ್‌ ಎಂದಾಗ.. ನೀವು ತಪ್ಪು ತಿಳಿಯುವುದಿಲ್ಲ ಅಂದರೆ ನನ್ನನ್ನು ರಾಹುಲ್‌ ಅಂತ ಕರೀರಿ..ಸರ್‌ ಬೇಡ ಎಂದರು.

ಜಿಎಸ್‌ಟಿ ಮತ್ತು ನೋಟ್‌ ಬ್ಯಾನ್‌ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್‌ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿ ಕಾರಿದರು. ಸರ್ಕಾರದ ನಿರ್ಧಾರದಿಂದ ಭಾರತದ ಆರ್ಥಿಕ ಸ್ಥಿತಿ ಕುಸಿದು ಹೋಗಲು ಕಾರಣವಾಗಿದೆ. ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿಲ್ಲ ಎಂದರು.

ಕನ್ನಡದಲ್ಲೇ ಪ್ರಶ್ನೆ ಕೇಳಿ ..ಅಡ್ಡಿ ಇಲ್ಲ 
ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಕನ್ನಡದಲ್ಲಿ ಪ್ರಶ್ನೆ ಕೇಳಿದಳು. ಈ ವೇಳೆ ಉಪನ್ಯಾಸಕರು ಇಂಗ್ಲೀಷ್‌ನಲ್ಲಿ ಪ್ರಶ್ನೆ ಕೇಳು ಎಂದು ಸೂಚನೆ ನೀಡಿದರು. ಇದಕ್ಕುತ್ತರವಾಗಿ ರಾಹುಲ್‌ ಕನ್ನಡದಲ್ಲೇ ಪ್ರಶ್ನೆ ಕೇಳು ತೊಂದರೆ ಇಲ್ಲ. ನಾನು ಭಾಷಾಂತರಿಸಿಕೊಂಡು ಉತ್ತರ ನೀಡುತ್ತೇನೆ ಎಂದರು. 

‘ಕಾಂಗ್ರೆಸ್‌ನದು ಒಂದು ದೇಶ ಹಲವು ಐಡಿಯಾ’ ಆದರೆ ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನದ್ದು ಒಂದು ದೇಶ ಒಂದು ಐಡಿಯಾ’ ಎಂದರು.  

Advertisement

ಕರ್ನಾಟಕಕ್ಕೂ ಉತ್ತರ ಪ್ರದೇಶಕ್ಕೂ ತುಂಬಾ ಅಂತರವಿದೆ.ನಾವು ಕರ್ನಾಟಕದಲ್ಲಿ ಯಾರ ಮೇಲೂ ಯಾವುದನ್ನೂ ಹೇರಿಕೆ ಮಾಡಿಲ್ಲ ಎಂದರು. 

ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಚಾಮುಂಡಿ ಬೆಟ್ಟಕ್ಕೆ  ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರೊಡನೆ ತೆರಳಿದ ರಾಹುಲ್‌ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟದಲ್ಲಿರುವ ಗಣಪತಿಗೂ ವಿಶೇಷ ಪೂಜೆ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next