Advertisement
ಭಾರತ್ ಜೋಡೋದ 13ನೇ ದಿನದ ಪಾದಯಾತ್ರೆಯ ಕೊನೆಯಲ್ಲಿ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಹಿತ ಆಯಾ ರಾಜ್ಯಗಳ ಮಾತೃಭಾಷೆಗಳ ಬಳಕೆ ಕುರಿತು ತಮ್ಮ ಭಾಷಣದಲ್ಲಿ ಒತ್ತು ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನಿರಾಕರಿಸುವುದಕ್ಕೆ ಅಚ್ಚರಿ ವ್ಯಕ್ತಡಿಸಿದರು.
Related Articles
Advertisement
ರೈತರಿಗಾಗಿ ಸರಕಾರ ಏನು ಮಾಡಿದೆ? :
ಪಾದಯಾತ್ರೆ ಸಂದರ್ಭದಲ್ಲಿ ಶೇಂಗಾ ಬೆಳೆಯನ್ನು ನೋಡಿದೆ. ಮಳೆಯಿಂದ ಎಲ್ಲರ ಬೆಳೆಗಳು ಹಾಳಾಗಿವೆ. ರಸ್ತೆ ಪಕ್ಕದಲ್ಲಿ ತರಕಾರಿ ಕೊಳೆಯುತ್ತಿವೆ. ಆಡಳಿತದಲ್ಲಿರುವ ಬಿಜೆಪಿ ರೈತರಿಗೆ ಸಹಾಯ ಮಾಡಲು ಏನು ಮಾಡಿದೆ ಎನ್ನುವುದನ್ನು ಹೇಳಬೇಕು. ರೈತರು ಏಕೆ ಜಿಎಸ್‌ಟಿ ಕಟ್ಟಬೇಕು ಎನ್ನುವುದಕ್ಕೆ ಉತ್ತರ ಕೊಡಬೇಕು ಎಂದು ರಾಹುಲ್ ಪ್ರಶ್ನಿಸಿದರು.
ರೇಷ್ಮೆ, ಶೇಂಗಾ ಮಾಹಿತಿ ಪಡೆದ ರಾಹುಲ್ ಗಾಂಧಿ :
ಬಿ.ಜಿ.ಕೆರೆ -ಕೋನಸಾಗರ ನಡುವಿನ ಪಾದಯಾತ್ರೆ ವೇಳೆ 9 ಗಂಟೆಗೆ ರೇಷ್ಮೆ ತೋಟದ ಮನೆಯೊಂದರ ಮುಂಭಾಗದಲ್ಲಿ ಉಪಾಹಾರದ ವಿರಾಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಹುಲ್ ಅವರು ರೇಷ್ಮೆ ಸೊಪ್ಪು, ಬೆಳವಣಿಗೆ, ಹುಳುಗಳು ಗೂಡು ಕಟ್ಟುವ ಬಗ್ಗೆ ಮಾಹಿತಿ ಪಡೆದುಕೊಂಡರು. ಜತೆಗಿದ್ದ ಡಿ.ಕೆ.ಶಿವಕುಮಾರ್ ಕೂಡ ಅಗತ್ಯ ಮಾಹಿತಿ ಹಾಗೂ ರೈತರ ಸಮಸ್ಯೆಗಳನ್ನು ವಿವರಿಸಿದರು.
ಬಳ್ಳಾರಿ ಸಮಾವೇಶಕ್ಕೆ ನಾಲ್ಕು ಲಕ್ಷ ಜನ ನಿರೀಕ್ಷೆ: ಡಿಕೆಶಿ :
ಚಿತ್ರದುರ್ಗ: ಬಳ್ಳಾರಿಯಲ್ಲಿ ಅ.15ರಂದು ನಡೆಯ ಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಸುಮಾರು 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೊಳಕಾಲ್ಮೂರಿನ ಕೋನಸಾಗರ ಬಳಿ ಭಾರತ್ ಜೋಡೋ ಕ್ಯಾಂಪ್‌ನಲ್ಲಿ ಮಾತನಾಡಿದ ಅವರು, ಸಮಾ ವೇಶಕ್ಕೆ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನು ಕೇಂದ್ರೀಕರಿಸಿದ್ದೇವೆ. ಶನಿವಾರ ಬೆಳಗ್ಗೆ ಪಾದಯಾತ್ರೆ ನಡೆಸಿ, ಮಧ್ಯಾಹ್ನದ ಬಳಿಕ ಸಮಾವೇಶ ನಡೆಸಲಿದ್ದೇವೆ ಎಂದು ಹೇಳಿದರು.