ಹೊಸದಿಲ್ಲಿ: ದೇಶದಲ್ಲಿ ಕೊರೊನಾದಿಂದಾಗಿ 47 ಲಕ್ಷ ಮಂದಿ ಅಸುನೀಗಿದ್ದಾರೆ ಎಂಬ ವರದಿಯನ್ನು ಆಧರಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯ ಮಾಡು ತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಹೊಸದಿಲ್ಲಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಸಂಭಿತ್ ಪಾತ್ರಾ “ಡಬ್ಲ್ಯುಎಚ್‌ಒ ಡೇಟಾ ಮತ್ತು ಕಾಂಗ್ರೆಸ್ ಬೇಟಾ(ರಾಹುಲ್) ಇಬ್ಬರ ದ್ದೂ ಸುಳ್ಳು. ಡಬ್ಲ್ಯುಎಚ್‌ಒ ವರದಿ ದೋಷ ಪೂರಿತ ಮತ್ತು ಕಾಲ್ಪನಿಕವಾಗಿದೆ’ ಎಂದಿದ್ದಾರೆ.
ಶುಕ್ರವಾರ ರಾಹುಲ್ ಗಾಂಧಿಯವವರು “ವಿಜ್ಞಾನ ಸುಳ್ಳು ಹೇಳಲ್ಲ. ಆದರೆ ಮೋದಿ ಹೇಳು ತ್ತಾರೆ’ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ. ಸರಕಾರ ಹೇಳುವಂತೆ 4.8 ಲಕ್ಷ ಜನರು ಕೊರೊನಾದಿಂದ ಸತ್ತಿಲ್ಲ ಬದಲಾಗಿ 47 ಲಕ್ಷ ಜನರು ಸಾವನ್ನಪ್ಪಿದ್ದಾರೆ.
ಸೋಂಕಿನಿಂದಾಗಿ ಕುಟುಂಬಸ್ಥರನ್ನು ಕಳೆದುಕೊಂಡವರನ್ನು ಗೌರವಿಸಿ. ಅವರೆಲ್ಲರಿಗೂ ತಲಾ 4 ಲಕ್ಷ ರೂ. ಪರಿಹಾರ ಕೊಡಿ’ ಎಂದು ಬರೆದುಕೊಂಡಿದ್ದರು.
ನಾವು ಲೆಕ್ಕ ತಪ್ಪಿಲ್ಲ: ಡಬ್ಲ್ಯುಎಚ್‌ಒ ವರದಿ ಬಂದ ತತ್‌ಕ್ಷಣ ಕೇಜ್ರಿವಾಲ್ ಸರಕಾರ, ನಾವು ಲೆಕ್ಕ ತಪ್ಪಿಲ್ಲ ಎಂದಿದೆ. “ಬೇರೆ ರಾಜ್ಯ ಅಥವಾ ದೇಶದ ದತ್ತಾಂಶ ನಮಗೆ ಗೊತ್ತಿಲ್ಲ. ಆದರೆ ದಿಲ್ಲಿಯಲ್ಲಿ ಒಟ್ಟು 25,600 ಮಂದಿ ಸೋಂಕಿಗೆ ಸಾವಿಗೀಡಾಗಿ ದ್ದಾರೆ. ನಾವು ಒಂದೂ ಸಾವನ್ನು ಲೆಕ್ಕದಿಂದ ಹೊರಗಿಟ್ಟಿಲ್ಲ’ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಇದೇ ವೇಳೆ, ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 3,545 ಹೊಸ ಸೋಂಕು ಪ್ರಕರಣ ಮತ್ತು 27 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ.