Advertisement

ವಿದೇಶ ಪ್ರವಾಸ, ರಾಹುಲ್ ಏನನ್ನು ಮುಚ್ಚಿಡುತ್ತಿದ್ದಾರೆ?

03:54 PM Aug 08, 2017 | Sharanya Alva |

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗಾಗಿ ಗುಜರಾತ್ ರಾಜ್ಯಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಮೇಲೆ ಬಿಜೆಪಿ, ಆರ್ ಎಸ್ ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ರಾಹುಲ್ ಗಾಂಧಿ ಭದ್ರತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಹೇಳಿದರು.

Advertisement

ಪ್ರವಾಹ ಪೀಡಿತ ಗುಜರಾತ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದ ವೇಳೆ ಭದ್ರತಾ ವೈಫಲ್ಯದಿಂದಾಗಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದರು. ಇದಕ್ಕೆ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಸದಸ್ಯರಿಗೆ ಈ ರೀತಿ ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಗುಜರಾತ್ ಗೆ ಆಗಮಿಸಿದ್ದ ವೇಳೆ ಭದ್ರತಾ ನಿಯಮಗಳನ್ನು ಪಾಲಿಸಿಲ್ಲ, ಪೊಲೀಸರು ಒದಗಿಸಿದ ಕಾರನ್ನು ರಾಹುಲ್ ಗಾಂಧಿ ಬಳಸಿಕೊಂಡಿಲ್ಲ. ರಾಹುಲ್ ಬುಲೆಟ್ ಪ್ರೂಫ್ ಕಾರನ್ನು ಬಳಸಿಲ್ಲ. ರಾಹುಲ್ ಭದ್ರತಾ ನಿಯಮಗಳನ್ನು ಪಾಲಿಸಲೇಬೇಕಾಗಿದೆ ಎಂದು ಲೋಕಸಭೆಯಲ್ಲಿ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ರಾಹುಲ್ ಗಾಂಧಿ ಆರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಆ ಸಂದರ್ಭದಲ್ಲಿ ಅವರು ಎಸ್ ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ಪಡೆದುಕೊಂಡಿರಲಿಲ್ಲವಾಗಿತ್ತು. ಹಾಗಾಗಿ ರಾಹುಲ್ ಗಾಂಧಿ ವಿದೇಶ ಪ್ರವಾಸ ಸಂದರ್ಭದಲ್ಲಿ ಎಸ್ ಪಿಜಿ ಭದ್ರತೆಯನ್ನು ಪಡೆಯದೇ ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next