Advertisement
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಹಾಗೂ ಅಕಾಲಿ ದಳ ಪಕ್ಷಗಳು, ದಂಗೆಯಲ್ಲಿ ಕಾಂಗ್ರೆಸ್ ಪಾತ್ರವಿಲ್ಲ ಎಂದಾದರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದೇಕೆ ಎಂದು ಪ್ರಶ್ನಿಸಿವೆ. ಅಲ್ಲದೆ ಸಿಖ್ಬರನ್ನು ಹತ್ಯೆಗೈದಿರುವ ಬಗ್ಗೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಒಪ್ಪಿಕೊಂಡಿದ್ದಾರೆ ಎಂದು ಅಕಾಲಿ ದಳದ ಮುಖಂಡ ಹಾಗೂ ಪಂಜಾಬ್ ಮಾಜಿ ಸಿಎಂ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ರಾಹುಲ್‌ರ ಈ ಹೇಳಿಕೆಯಿಂದ ಅವರಲ್ಲಿ ನಾಯಕತ್ವ ಗುಣ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮನಮೋಹನ ಸಿಂಗ್ ಕ್ಷಮೆ ಕೇಳಿದ್ದನ್ನು ರಾಹುಲ್ ಮರೆತಂತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
Related Articles
ಡೋಕ್ಲಾಂ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಹೀಗಾಗಿ ನಾನು ಮಾತನಾಡಲಾರೆ ಎಂದು ರಾಹುಲ್ ಗಾಂಧಿ ಹೇಳಿರುವುದು ಈಗ ಅಪಹಾಸ್ಯಕ್ಕೆ ಗುರಿಯಾಗಿದೆ. ನೀವು ಅಧಿಕಾರದಲ್ಲಿದ್ದಿದ್ದರೆ ಡೋಕ್ಲಾಂ ಸಮಸ್ಯೆಯನ್ನು ಹೇಗೆ ನಿವಾರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ರಾಹುಲ್ ಈ ಉತ್ತರ ನೀಡಿದ್ದಾರೆ. ಇದಕ್ಕೂ ಮೊದಲು ರಾಹುಲ್ ಡೋಕ್ಲಾಂ ವಿಚಾರವನ್ನು ಮೋದಿ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಬಿಜೆಪಿ ಮುಖಂಡ ಎಂ.ಜೆ.ಅಕºರ್, ರಾಹುಲ್ ಬುದ್ಧಿಮತ್ತೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ ವಿವಿಧ ಸಮಿತಿಗಳಲ್ಲಿ ರಾಹುಲ್ ಇದ್ದಾರೆ. ಅವರಿಗೆ ಡೋಕ್ಲಾಂ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಇಲ್ಲದಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
Advertisement
ರಾಹುಲ್ ವಿರುದ್ಧ ಮಾನಹಾನಿ ದೂರುವಿದೇಶದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ಬಿಹಾರದ ಮುಜಫರ್‌ಪುರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ವಕೀಲ ಸುಧೀರ್ ಕುಮಾರ್ ಓಝಾ ಎಂಬುವವರು ದೂರು ದಾಖಲಿಸಿದ್ದು, ವಿಚಾರಣೆಯನ್ನು ಸೆ.4ಕ್ಕೆ ನಿಗದಿಸಲಾಗಿದೆ. ರಾಹುಲ್ ಅವರು ಭಯೋತ್ಪಾದನೆಯನು ಸಮರ್ಥಿಸಿಕೊಂಡಿದ್ದಾರೆ. ನಿರುದ್ಯೋಗದಿಂದಾಗಿ ಐಸಿಸ್‌ನಂತಹ ಉಗ್ರ ಸಂಘಟನೆ ಹುಟ್ಟಿಕೊಳ್ಳುತ್ತದೆ ಹಾಗೂ ಭಾರತದಲ್ಲಿ ಇಂತಹ ಸನ್ನಿವೇಶ ಉಂಟಾಗಿದೆ ಎಂದಿದ್ದಾರೆ. ಇದು ದೇಶಕ್ಕೆ ಮಾಡಿದ ಅವಮಾನ ಎಂದು ಆರೋಪಿಸಲಾಗಿದೆ.