Advertisement
ಯಾತ್ರೆ ವೇಳೆ ಇಂಡಿಯಾ ನ್ಯೂಸ್‌ನ ವರದಿಗಾರ ಹಾಗೂ ಮಾಲಕ ಶಿವ್ ಪ್ರಸಾದ್ ಯಾದವ್ ಅವರೊಂದಿಗೆ ಕೈ ಕಾರ್ಯಕರ್ತರು ಒರಟಾಗಿ ವರ್ತಿಸಿದ್ದ ರು. ಈ ವೇಳೆ ರಾಹುಲ್, “ನೀವು ಮಾಧ್ಯಮದವರೆ? ನಿಮ್ಮ ಹೆಸರೇನು? ನಿಮ್ಮ ಮಾಲಕನ ಹೆಸರೇನು? ಅವರು ಒಬಿಸಿಯೇ? ಅಲ್ಲ. ಅವರು ದಲಿತರೇ? ಅಲ್ಲ’ ಎಂದು ಪ್ರಶ್ನಿಸಿದ್ದರು. ಈ ವೀಡಿಯೋ ವೈರಲ್ ಆಗಿದ್ದು, ರಾಹುಲ್ ವಿರುದ್ಧ ಅಪಸ್ವರ ಎದ್ದಿದೆ. ಇತ್ತ ಕಾಂಗ್ರೆಸ್ ಮೀಡಿಯಾದಲ್ಲಿ ಮೀಸಲು ಕ್ಷೇತ್ರದ ಮಂದಿ ಎಷ್ಟಿದ್ದಾರೆ ಎಂದು ತಿಳಿಯಲು ಹೀಗೆ ಪ್ರಶ್ನಿಸಿದ್ದಾರೆ ಅಷ್ಟೇ ಎಂದು ಸಮಜಾಯಷಿ ನೀಡಿದೆ.
ರಾಯ್‌ಬರೇಲಿ ನ್ಯಾಯ್ ಯಾತ್ರೆ ವೇಳೆ ಪತ್ರಕರ್ತನಿಗೆ ಜನ ಸಮೂಹ ತೊಂದರೆ ನೀಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಚುನಾವಣ ಸಮಯದಲ್ಲಿ ಉದ್ವಿಗ್ನತೆ ಹೆಚ್ಚಾಗ ದಂತೆ, ಯಾವುದೇ ವ್ಯಕ್ತಿಗೆ ಹಾನಿ ಯಾಗ ದಂತೆ ಎಲ್ಲ ರಾಜಕೀಯ ಪಕ್ಷ ಗಳು ಮತ್ತು ನಾಯಕರು ಎಚ್ಚರಿಕೆ ವಹಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದಿದೆ.