ನವದೆಹಲಿ: ಅಪ್ಪಿತಪ್ಪಿ ಪವಾಡ ನಡೆದರೂ ಕೂಡಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ಈ ದೇಶದ ಪ್ರಧಾನಿಯಾಗೋದಿಲ್ಲ ಎಂದು ಕೇಂದ್ರ ಸಚಿವೆ, ಹಿರಿಯ ಬಿಜೆಪಿ ನಾಯಕಿ ಮನೇಕಾ ಗಾಂಧಿ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಮೇಠಿ ಮತ್ತು ವಯನಾಡ್ ನಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವ್ಯಕ್ತಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂದರು.
ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆಕೆ ಜೊತೆ ಕಾರ್ಯಕರ್ತರೇ ಇಲ್ಲ ಎಂದರು. ತಾನು ಸ್ಪರ್ಧಿಸುತ್ತಿರುವ ಸುಲ್ತಾನ್ ಪುರ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಪತಿ ಸಂಜಯ್ ಗಾಂಧಿ ಅವರು ಎರಡು ಬಾರಿ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕಳೆದ ಬಾರಿ ಸುಲ್ತಾನ್ ಪುರ್ ಕ್ಷೇತ್ರದಿಂದ ಪುತ್ರ ವರುಣ್ ಗಾಂಧಿ ಗೆಲುವು ಸಾಧಿಸಿದ್ದಾನೆ. ಈ ಬಾರಿ ನಾನು ಸುಲ್ತಾನ್ ಪುರದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಕಠಿಣ ಶ್ರಮವಹಿಸಿ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಗೆಲುವು ತನ್ನದೇ ಎಂದು ಮನೇಕಾ ಈ ಸಂದರ್ಭದಲ್ಲಿ ಹೇಳಿದರು.