Advertisement

ನರೇಂದ್ರ ಮೋದಿ ಭಾರತದ ದುರ್ಬಲ ಪ್ರಧಾನಿ; ರಾಹುಲ್ ಗಾಂಧಿ ಟ್ವೀಟ್

04:53 PM Jul 05, 2017 | Team Udayavani |

ನವದೆಹಲಿ: ನರೇಂದ್ರ ಮೋದಿ ಅವರು ಭಾರತದ ದುರ್ಬಲ ಪ್ರಧಾನಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಅಮೆರಿಕದ ಪ್ರವಾಸದ ಬಗ್ಗೆ ಬುಧವಾರ ವ್ಯಂಗ್ಯವಾಡಿದ್ದಾರೆ.

Advertisement

ಭಾರತದ ಆಡಳಿತವಿರುವ ಕಾಶ್ಮೀರ ಎಂಬ ಅಮೆರಿಕದ ಉಲ್ಲೇಖವನ್ನು ಒಪ್ಪಿಕೊಂಡಿರುವ ಮೋದಿ ಅವರು ತಮ್ಮ ಪ್ರವಾಸದ ವೇಳೆ ಎಚ್ 1 ಬಿ ವೀಸಾ ವಿವಾದದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ದೂರಿದ್ದಾರೆ.

ಹಿಬ್ಜುಲ್ ಮುಜಾಹಿದೀನ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಅಮೆರಿಕ ಜೂನ್ 26ರಂದು ಜಾಗತಿಕ ಉಗ್ರ ಎಂದು ಘೋಷಿಸಿ ನೀಡಿದ ಹೇಳಿಕೆಯಲ್ಲಿ ಭಾರತದ ಆಡಳಿತವಿರುವ ಜಮ್ಮು ಕಾಶ್ಮೀರ ಎಂದು ಹೇಳಲಾಗಿತ್ತು.

ಅಮೆರಿಕದ ಈ ಹೇಳಿಕೆಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಸಲಾಹುದ್ದೀನ್ ಗಡಿ ಭಯೋತ್ಪಾದನೆಯಲ್ಲಿ ತೊಡಗಿರುವುದನ್ನು ಸಾಬೀತುಪಡಿಸುತ್ತದೆ ಎಂದು ಭಾರತ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next