Advertisement

ಎನ್‌ಸಿಎನಲ್ಲಿ ರಾಹುಲ್‌ ದಾ‹ವಿಡ್‌ಗೆ ಮಹತ್ವದ ಹೊಣೆ?

05:46 AM Apr 03, 2019 | mahesh |

ಬೆಂಗಳೂರು: ಭಾರತ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರಾಹುಲ್‌ ದ್ರಾವಿಡ್‌, ಪ್ರಸ್ತುತ ಭಾರತ 19 ವಯೋಮಿತಿ ಹಾಗೂ ಎ ತಂಡದ ತರಬೇತುದಾರ. ಕಿರಿಯರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವ ಅವರಿಗೆ, ಇನ್ನೊಂದು ಮಹತ್ತರ ಹೊಣೆಗಾರಿಕೆಯನ್ನು ಬಿಸಿಸಿಐ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಅದು ಯಾವ ಜವಾಬ್ದಾರಿ ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಮೂಲಗಳ ಪ್ರಕಾರ, ಬೆಂಗಳೂರಿನ ಚಿನ್ನಸ್ವಾಮಿಯಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ತರಬೇತು ವಿಭಾಗವನ್ನು ಪುನರೂಪಿಸುವ ಹೊಣೆಗಾರಿಕೆ ಸಿಗಲಿದೆ.

Advertisement

ಎನ್‌ಸಿಎ ತರಬೇತು ವಿಭಾಗವನ್ನು ಸಂಪೂರ್ಣ ಸಿದ್ಧಪಡಿಸುವುದು, ಹೊಸ ತರಬೇತುದಾರರನ್ನು ನೇಮಕ ಮಾಡಿಕೊಳ್ಳುವುದು ಇದೆಲ್ಲ ರಾಹುಲ್‌ ಹೊಣೆಗಾರಿಕೆಯಾಗಿರಬಹುದು. ದೇಶಾದ್ಯಂತ ವಲಯಾಧಾರಿತವಾಗಿ
ದ್ರಾವಿಡ್‌ ತರಬೇತುದಾರರನ್ನು ಸಿದ್ಧಪಡಿಸಲಿದ್ದಾರೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಎನ್‌ಸಿಎ ದ್ರಾವಿಡ್‌ ಕೂಸಾಗಿರಲಿದೆ ಎನ್ನುವುದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಹೇಳಿಕೆ. ಹೀಗೆಂದು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಹುಲ್‌ ದ್ರಾವಿಡ್‌ ಸಾಮರ್ಥ್ಯಕ್ಕೆ ಈ ಜವಾಬ್ದಾರಿ ಬಹಳ ದೊಡ್ಡದ್ದೇನಲ್ಲ. ಭಾರತ ಮಾತ್ರವೇಕೆ ವಿಶ್ವ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ದ್ರಾವಿಡ್‌ ಕೂಡ ಇದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರಾಡಿದ ಅಸಾಮಾನ್ಯ ಇನಿಂಗ್ಸ್‌ಗಳನ್ನು, ಅವರನ್ನು ಬಿಟ್ಟರೆ ದೇವರು ಮಾತ್ರ ಆಡಲು ಸಾಧ್ಯವೆಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಒಮ್ಮೆ ವರ್ಣಿಸಿದ್ದರು. ಗಂಗೂಲಿ ನಾಯಕತ್ವದಲ್ಲಿದ್ದಾಗ ಭಾರತ ತಂಡ ಕೋಲ್ಕತ
ಮತ್ತು ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಪಂದ್ಯವನ್ನು ಯಾರೂ ಕಲ್ಪನೆ ಮಾಡದ ರೀತಿಯಲ್ಲಿ ಗೆದ್ದುಕೊಂಡಿತ್ತು. ಇದಕ್ಕೆ ದ್ರಾವಿಡ್‌ ಬ್ಯಾಟಿಂಗ್‌ ನಿರ್ಣಾಯಕ ಕಾರಣವಾಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಕೆಲ
ಐಪಿಎಲ್‌ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು. ಆರ್‌ಸಿಬಿ ತಂಡದಿಂದ ಹೊರಬಿದ್ದ ನಂತರ, ರಾಜಸ್ಥಾನ್‌ ತಂಡವನ್ನು ಕೂಡಿ  ಕೊಂಡು ಸರಾಸರಿ ಯಶಸ್ಸು ಸಾಧಿಸಿದರು. ದೆಹಲಿ ತಂಡದ ಮೆಂಟರ್‌ ಆಗಿಯೂ ಇದ್ದರು. ಮುಂದೆ ಭಾರತ 19 ವಯೋಮಿತಿ, ಎ ತಂಡದ ತರಬೇತುದಾರರಾದರು.
ಅವರ ಅವಧಿಯಲ್ಲಿ ಭಾರತ 19 ವಯೋಮಿತಿ ತಂಡ 2016ರ ವಿಶ್ವಕಪ್‌ ಫೈನಲ್‌ಗೇರಿ ಸೋತಿದ್ದರೆ, 2018ರಲ್ಲಿ ವಿಶ್ವಕಪ್‌ ಗೆದ್ದಿತ್ತು. ಭಾರತ ಎ ತಂಡವೂ ವಿಶ್ವದ ವಿವಿಧ ರಾಷ್ಟ್ರಗಳಿಗೆ ಪ್ರವಾಸ ಹೋಗಿ ಯಶಸ್ವಿಯಾಗಿತ್ತು. ಅವರ ಕಾಲದಲ್ಲಿ ಬಂದ ನಿಯಮವೊಂದು ಅಂತಾರಾಷ್ಟ್ರೀಯ ತಂಡದ ಆಯ್ಕೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಎಷ್ಟೇ ಉತ್ತಮವಾಗಿ ಆಡುವ ಕ್ರಿಕೆಟಿಗರಾಗಿದ್ದರೂ, ಅವರು ಭಾರತ ಎ ತಂಡದಲ್ಲಿ ಆಡಿ ಅನುಭವಿಗಳಿಸಿದ ನಂತರವೇ ಹಿರಿಯರ ತಂಡಕ್ಕೆ ಆಯ್ಕೆಯಾಗಬೇಕು ಎನ್ನುವುದು ಅವರ ಅಭಿಪ್ರಾಯ. ಅದನ್ನು ಬಿಸಿಸಿಐ ಗಂಭೀರವಾಗಿ ಅದರಂತೆ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಇದರಿಂದ ಕ್ರಿಕೆಟಿಗರಿಗೂ ಲಾಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next