Advertisement

ರಾಹುಲ್‌-ಡಿಕೆಶಿ ಭೇಟಿ : ಬ್ಲಾಕ್‌ ಮರು ವಿಂಗಡಣೆ, ಪಕ್ಷ ಸಂಘಟನೆ ಚರ್ಚೆ

08:08 AM Jun 23, 2021 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ತೀವ್ರ ಗೊಳ್ಳುತ್ತಿರುವ ನಡುವೆಯೇ ಮಂಗಳ ವಾರ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ತಮ್ಮ ಬೆಂಬಲಿಗ ಕಾರ್ಯಕರ್ತರಿಗೆ ಹೊಸ ಸಂದೇಶ ನೀಡಿದ್ದಾರೆ.

Advertisement

ಪಕ್ಷದ ತಳಮಟ್ಟದ ಸಂಘಟನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದು, ಬ್ಲಾಕ್‌ ಮರು ವಿಂಗಡಣೆ ಮಾಡಲಾಗುವುದು. ಜಿಲ್ಲಾ ಧ್ಯಕ್ಷರು ಮತ್ತು ಪದಾಧಿ ಕಾರಿ ಗಳ ಬದಲಾವಣೆ ಬಗ್ಗೆ ಚರ್ಚಿಸ ಲಾಗಿದೆ. ಒಂದು ವಾರದಲ್ಲಿ ಆಂತರಿಕ ವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗು ವುದು ಎಂದು ಹೇಳಿದರು.

ಪ್ರದೇಶ ಕಾಂಗ್ರೆಸ್‌ ಸಮಿತಿ ಪದಾಧಿ ಕಾರಿಗಳ ನೇಮಕ, ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಸಹಿತ ಕೆಲವು ವಿಚಾರಗಳ ಕುರಿತು ರಾಹುಲ್‌ ಜತೆ ಚರ್ಚೆ ನಡೆಸಲಾಗಿದೆ. ಕೆಲವರು ಮುಂದಿನ ಸಿಎಂ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳ ಬಗ್ಗೆಯೂ ರಾಹುಲ್‌ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ, ಪೆಟ್ರೋಲ್‌ ದರ ಏರಿಕೆ ಖಂಡಿಸಿ ಸರಣಿ ಪ್ರತಿಭಟನೆ, ಕೊರೊನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್‌ ಕೇರ್ ಮತ್ತು ಶಾಸಕರಿಂದ ನೀಡಿದ ನೆರವು ಕುರಿತು ಮಾಹಿತಿ ನೀಡಿದ್ದಾರೆ. ಇದಕ್ಕೆ ಮುನ್ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಮನೆ ಮನೆ ಭೇಟಿ
ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುತ್ತೇವೆ. ಸರಕಾರ ನೀಡಿರುವ ಪ್ಯಾಕೇಜ್‌ ತಲುಪಿದೆಯೇ ಇಲ್ಲವೇ ಎಂಬುದರ ಬಗ್ಗೆಯೂ ರೈತರೊಂದಿಗೆ ನೇರ ಸಂಪರ್ಕ ಮಾಡಿ ಮಾಹಿತಿ ಪಡೆಯುತ್ತೇವೆ ಎಂದರು.

Advertisement

ಮುಂದಿನ ಸಿಎಂ ಹೇಳಿಕೆ ವಿಚಾರವೆಲ್ಲ ಹೈಕಮಾಂಡ್‌ ಗಮನಕ್ಕೆ ಬಂದಿದೆ. ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಹೈಕಮಾಂಡ್‌ ಬಳಿ ನಾಯಕತ್ವ ಕುರಿತು ಚರ್ಚಿಸುವುದು ನನ್ನ ಅಜೆಂಡಾ ಅಲ್ಲ. ನಮ್ಮ ಹೋರಾಟ ಏನಿದ್ದರೂ ಬಿಜೆಪಿ ವಿರುದ್ಧ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next