Advertisement

ಕೇರಳಕ್ಕೆ ರಾಹುಲ್‌ ಭೇಟಿ ಮೀನುಗಾರರ ಜತೆ ಚರ್ಚೆ

04:47 PM Aug 29, 2018 | Team Udayavani |

ಅಲಪ್ಪುಳ: ಪ್ರವಾಹ ಸಂತ್ರಸ್ತ ಕೇರಳಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಂತ್ರಸ್ತರನ್ನು ರಕ್ಷಿಸುವಲ್ಲಿ ಮಹತ್ವದ ಪರಿಶ್ರಮ ವಹಿಸಿದ ಮೀನುಗಾರರನ್ನು ಭೇಟಿ ಮಾಡಿದರು. ದೇಶದಲ್ಲಿ ರೈತರು ಎದುರಿಸುತ್ತಿರು ವಂಥದ್ದೇ ಸಮಸ್ಯೆಗಳನ್ನು ಬೆಸ್ತರೂ ಎದುರಿಸು ತ್ತಿದ್ದು, ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

Advertisement

2 ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿರುವ ರಾಹುಲ್‌ ಅಲಪ್ಪುಳಕ್ಕೆ ಭೇಟಿ ನೀಡಿ, ಸಂತ್ರಸ್ತ ರೊಂದಿಗೆ ಮಾತುಕತೆ ನಡೆಸಿದರು. ಮುಂದಿನ ದಿನಗಳಲ್ಲಿ ಕರಾವಳಿ ನಿಗ್ರಹ ಪಡೆಯು ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಕ್ಕೆ ಮೀನುಗಾರರನ್ನು ಬಳಸಿಕೊಳ್ಳಬಹುದಾಗಿದೆ. 3 ಸಾವಿರ ಬೆಸ್ತ‌ರು 70 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ ಎಂದರು.

ಗೂಗಲ್‌ನಿಂದ 7 ಕೋಟಿ ರೂ.: ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರುಜ್ಜೀವನ ಕಾರ್ಯಕ್ಕಾಗಿ ಗೂಗಲ್‌ 7 ಕೋಟಿ ರೂ. ನೀಡಲಿದೆ ಎಂದು ಆಗ್ನೇಯ ಏಷ್ಯಾ ಮತ್ತು ಭಾರತ ವಿಭಾಗದ ಉಪಾಧ್ಯಕ್ಷ ರಾಜನ್‌ ಆನಂದನ್‌ ಹೇಳಿದ್ದಾರೆ. ಅಲ್ಲದೆ ಈಗಾಗಲೇ ವಿಪತ್ತು ನಿರ್ವಹಣೆ ತಂಡವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದೂ ತಿಳಿಸಿದ್ದಾರೆ. ಇದೇ ವೇಳೆ, ಕಳೆದ 14 ದಿನಗಳಲ್ಲಿ ಕೇರಳ ಸಿಎಂ ಪರಿಹಾರ ನಿಧಿಯಲ್ಲಿ ಒಟ್ಟು 713.92 ಕೋಟಿ ರೂ. ಸಂಗ್ರಹವಾಗಿದೆ ಎಂದು ಸರಕಾರ ತಿಳಿಸಿದೆ.

ಕೇರಳದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆಗೆ 15 ದಿನ ಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದ್ದು, ಆ.31ಕ್ಕೆ ಇದ್ದ ಗಡುವನ್ನು ಸೆ. 15ರ ವರೆಗೆ ವಿಸ್ತರಿಸ ಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಸಂತ್ರಸ್ತರ ನಿಧಿಗೆ ಜಾಮೀನು ಮೊತ್ತ ನಿಗದಿ
ಜಾರ್ಖಂಡ್‌ ಹೈಕೋರ್ಟ್‌ ವಿಶಿಷ್ಟ ತೀರ್ಪು ನೀಡಿದ್ದು, ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಜಾಮೀನು ನೀಡಲು ಅಡಮಾನ ಮೊತ್ತವನ್ನು ಕೇರಳ ಸಿಎಂ ಪರಿಹಾರ ನಿಧಿಗೆ ಪಾವತಿ ಮಾಡಬೇಕು ಎಂಬ ಷರತ್ತು ವಿಧಿಸಿದೆ. ಮೋಸ ಪ್ರಕರಣದಲ್ಲಿ ಬಂಧಿತರಾಗಿದ್ದ ಉತ್ಪಲ್‌ ರಾಯ್‌ಗೆ 7 ಸಾವಿರ ರೂ. ಹಾಗೂ ಇತರ ಇಬ್ಬರಿಗೆ ತಲಾ 5 ಸಾವಿರ ರೂ. ಜಾಮೀನು ಅಡಮಾನ ಮೊತ್ತವನ್ನಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ಪಾವತಿ ಮಾಡಿ, ಅದರ ದಾಖಲೆ ನೀಡಬೇಕು ಎಂದು ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next