Advertisement

AFGvsPAK ರೆಹಮನುಲ್ಲಾ ಗುರ್ಬಾಜ್ ಭರ್ಜರಿ ಶತಕ: ಎರಡನೇ ಪಂದ್ಯದಲ್ಲಿ ತಿರುಗಿ ಬಿದ್ದ ಅಫ್ಘಾನ್

07:04 PM Aug 24, 2023 | Team Udayavani |

ಹಂಬಂತೋಟಾ: ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾಗಿದ್ದ ಅಫ್ಘಾನಿಸ್ತಾನ ತಂಡವು ಎರಡನೇ ಪಂದ್ಯದಲ್ಲಿ ಸೆಟೆದು ನಿಂತಿದೆ. ರೆಹಮನುಲ್ಲಾ ಗುರ್ಬಾಜ್ ಅವರ ಭರ್ಜರಿ ಶತಕದ ನೆರವಿನಿಂದ ಅಫ್ಘಾನ್ ತಂಡವು ಐದು ವಿಕೆಟ್ ಕಳೆದುಕೊಂಡು 300 ರನ್ ಪೇರಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಅಫ್ಘಾನ್ ತಂಡವು ಭರ್ಜರಿ ಆರಂಭ ಪಡೆಯಿತು. ಇಬ್ರಾಹಿಂ ಜದ್ರಾನ್ ಮತ್ತು ರೆಹಮನುಲ್ಲಾ ಗುರ್ಬಾಜ್ ಮೊದಲ ವಿಕೆಟ್ ಗೆ ಬರೋಬ್ಬರಿ 227 ರನ್ ಜೊತೆಯಾಟವಾಡಿದರು. ಇಬ್ರಾಹಿಂ ಜದ್ರಾನ್ ಅವರು 101 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರೆ, ರೆಹಮನುಲ್ಲಾ ಗುರ್ಬಾಜ್ ಅದ್ಭುತ ಶತಕ ಗಳಿಸಿದರು. 151 ಎಸೆತ ಎದುರಿಸಿದ ಗುರ್ಬಾಜ್ 14 ಬೌಂಡರಿ ಮತ್ತು ಮೂರು ಸಿಕ್ಸರ್ ನೆರವಿನಿಂದ 151 ರನ್ ಮಾಡಿದರು.

ಈ ಜೊತೆಯಾಟ ಕೊನೆಯಾದ ಬಳಿಕ ಅಫ್ಘಾನ್ ತಂಡವು ಸತತ ವಿಕೆಟ್ ಕಳೆದುಕೊಂಡಿತು. ಅನುಭವಿ ಮೊಹಮ್ಮದ್ ನಬಿ 29 ರನ್ ಮಾಡಿದರೆ ನಾಯಕ ಹಶ್ಮತುಲ್ಲಾಹ್ ಶಾಹಿದಿ 15 ರನ್ ಮಾಡಿದರು.

ಇದನ್ನೂ ಓದಿ:Goa ಪೊಂಡಾದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತ ರಾಷ್ಟ್ರಪತಿ ಮುರ್ಮು

ಪಾಕಿಸ್ತಾನದ ಪರ ಶಹೀನ್ ಅಫ್ರಿದಿ ಎರಡು ವಿಕೆಟ್ ಕಿತ್ತರೆ, ನಸೀಂ ಶಾ ಮತ್ತು ಉಸಾಮ ಮಿರ್ ತಲಾ ಒಂದು ವಿಕೆಟ್ ಪಡೆದರು.

Advertisement

ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನ್ ತಂಡವು ಕೇವಲ 59 ರನ್ ಗಳಿಗೆ ಆಲೌಟಾಗಿ ಮುಖಭಂಗ ಅನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 201 ರನ್ ಗಳಿಸಿತ್ತು. ಅಫ್ಘಾನಿಸ್ತಾನ 142 ರನ್ ಗಳ ಅಂತರದಿಂದ ಸೋಲನುಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next