Advertisement

2ನೇ ಏಕದಿನ: ರಹಾನೆ ಶತಕ, ವಿಂಡೀಸ್‌ ಎದುರು ಭಾರತಕ್ಕೆ ಭರ್ಜರಿ ಜಯ

11:52 AM Jun 26, 2017 | Team Udayavani |

ಪೋರ್ಟ್‌ ಆಫ್ ಸ್ಪೇನ್‌ : ಅಜಿಂಕ್ಯ ರಹಾನೆ ಅವರ ಅದ್ಭುತ ಶತಕ ಮತ್ತು ಬೌಲರ್‌ಗಳು ತೋರಿದ ಅತ್ಯುತ್ತಮ ನಿರ್ವಹಣೆಯಿಂದ ಭಾರತ, ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಐದು ಪಂದ್ಯಗಳ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು 105 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಜಯಿಸಿ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ. ಮೊದಲ ಏಕದಿನ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ, ಮಳೆಯಿಂದಾಗಿ 43 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಐದು ವಿಕೆಟ್‌ ನಷ್ಟಕ್ಕೆ 301 ರನ್‌ ಮಾಡಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್‌ ಇಂಡೀಸ್‌ 43 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 205 ರನ್‌ ಮಾತ್ರವೇ ತೆಗೆಯಲು ಶಕ್ತವಾಗಿ ಸೋಲೊಪ್ಪಿಕೊಂಡಿತು.

ಭಾರತದ ಬ್ಯಾಟಿಂಗ್‌ನಲ್ಲಿ ಆರಂಭಕಾರ ಅಜಿಂಕ್ಯ ರಹಾನೆ 104 ಎಸೆತ ಎದುರಿಸಿ 2 ಸಿಕ್ಸರ್‌, 10 ಬೌಂಡರಿಗಳನ್ನು ಒಳಗೊಂಡ 103 ರನ್‌ ಬಾರಿಸಿ ಮಿಂಚಿದರು. ನಾಯಕ ವಿರಾಟ್‌ ಕೊಹ್ಲಿ ಕೇವಲ 66 ಎಸೆತಗಳಲ್ಲಿ 87 ರನ್‌ ಸಿಡಿಸಿದರು. ಶಿಖರ್‌ ಧವನ್‌ 59 ಎಸೆತಗಳಲ್ಲಿ 63 ರನ್‌ ಬಾರಿಸಿದರು. 

ಭಾರತೀಯ ಎಸೆಗಾರರ ಪೈಕಿ ಕುಲದೀಪ್‌ ಯಾದವ್‌ 3 ವಿಕೆಟ್‌ ಕಿತ್ತರೆ ಭುವನೇಶ್ವರ ಕುಮಾರ್‌ 2 ಹಾಗೂ ರವಿಚಂದ್ರನ್‌ ಅಶ್ವಿ‌ನ್‌ 1 ವಿಕೆಟ್‌ ಕಿತ್ತರು. 

Advertisement

Udayavani is now on Telegram. Click here to join our channel and stay updated with the latest news.

Next