Advertisement

ಹಾಟ್‌ ಕಾರ್ಪೋರೆಟ್‌ ಲುಕ್‌ನಲ್ಲಿ ರಾಗಿಣಿ

09:58 AM Nov 12, 2019 | Team Udayavani |

ಇತ್ತೀಚೆಗಷ್ಟೇ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ರಾಗಿಣಿ ದ್ವಿವೇದಿ, ಈಗ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ.

Advertisement

ಹೌದು, ರಾಗಿಣಿ ಅಭಿನಯದ ಹೊಸ ಚಿತ್ರದ ತೆರೆಮರೆಯ ಕೆಲಸಗಳು ಆರಂಭವಾಗಿದ್ದು, ಈ ಚಿತ್ರವನ್ನು ಪ್ರಕಾಶ್‌ ಬೆಳವಾಡಿ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ರಾಗಿಣಿ  ಅಮೆರಿಕಾದಲ್ಲಿ ದೊಡ್ಡ ಕಾರ್ಪೋರೆಟ್‌ ಕಂಪೆನಿಯನ್ನು ಮುನ್ನೆಡೆಸುವ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು ಈ ಚಿತ್ರದ ಬಹುತೇಕ ಚಿತ್ರೀಕರಣ ಅಮೆರಿಕಾದಲ್ಲಿಯೇ ನಡೆಯಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಏಪ್ರಿಲ್‌ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಈ ಚಿತ್ರದ ಟೈಟಲ್‌, ರಾಗಿಣಿ ಅವರ ಜೊತೆ ಅಭಿನಯಿಸಲಿರುವ ಇತರೆ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ. ಇನ್ನು ಈ ಚಿತ್ರದ ಬಗ್ಗೆ ಮಾತನಾಡುವ ರಾಗಿಣಿ, “ಇಲ್ಲಿಯವರೆಗೆ ನಾನು ಅಭಿನಯಿಸಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಚಿತ್ರದಲ್ಲಿದೆ. ವಿದೇಶದಲ್ಲಿ ನಡೆದ ಮತ್ತು ಜಗತ್ತಿನ ಗಮನವನ್ನು ಸೆಳೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಎರಡೂ ಹೊಸತಾಗಿದೆ. ಇದಕ್ಕಿಂತ ಹೆಚ್ಚಾಗಿ ಈ ಚಿತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next