Advertisement

ಕಿರುತೆರೆಗೆ ರಾಗಿಣಿ

11:07 AM Nov 28, 2017 | |

ಕನ್ನಡದ ಬಹುತೇಕ ನಟಿಮಣಿಗಳು ಈಗ ಕಿರುತೆರೆ ಅಂಗಳಕ್ಕೆ ಜಿಗಿಯುತ್ತಿದ್ದಾರೆ. ಆ ಸಾಲಿಗೆ ರಾಗಿಣಿ ಕೂಡ ಸೇರಿದ್ದಾರೆ. ಹೌದು, ಈ ಹಿಂದೆ ಸಣ್ಣಗಾಗಿ ಸುದ್ದಿಯಾದರು. ಇನ್ನೆಲ್ಲೋ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸದ್ದು ಮಾಡಿದರು. ಈಗ ಹೊಸ ಸುದ್ದಿಯೆಂದರೆ, ಅವರೊಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಅದಕ್ಕೆ ಪೂರಕ ಎಂಬಂತೆ ರಾಗಿಣಿ ತಮ್ಮ ಟ್ವಿಟ್ಟರ್‌ ಖಾತೆ ಮೂಲಕ ಒಂದಷ್ಟು ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಆ ಫೋಟೋ ಜತೆಗೆ ಸುವರ್ಣ ವಾಹಿನಿಯಲ್ಲೊಂದು ಕಾಮಿಡಿ ಶೋ ನಡೆಸಿಕೊಡುವ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ.  ಆದರೆ, ಆ ಶೋ ಯಾವುದು, ರಾಗಿಣಿ ಆ ಕಾರ್ಯಕ್ರಮದ ಜಡ್ಜ್ ಆಗಿರುತ್ತಾರೋ, ನಿರೂಪಣೆ ಮಾಡುತ್ತಾರೋ ಎಂಬುದು ಗೊತ್ತಿಲ್ಲ.

ಆ ಕಾಮಿಡಿ ಶೋ ಹೇಗಿರುತ್ತೆ ಎಂಬುದಕ್ಕೂ ಉತ್ತರವಿಲ್ಲ. ಆದರೆ, ರಾಗಿಣಿ ಈಗ ಶೋ ಮಾಡುತ್ತಿರುವುದಂತೂ ಹೌದು. ಆದರೆ, ಆ ಶೋ ಯಾವಾಗ ಶುರುವಾಗುತ್ತೆ, ಅದರ ರೂಪುರೇಷೆ ಹೇಗೆಲ್ಲಾ ಇರುತ್ತೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಸದ್ಯಕ್ಕೆ ಈ ಫೋಟೋವೊಂದೇ ಆ ಕಾರ್ಯಕ್ರಮ ಮಾಡುತ್ತಾರೆ ಅನ್ನುವುದಕ್ಕೆ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next