Advertisement

ಟೆರರಿಸ್ಟ್‌ ಫ‌ಸ್ಟ್‌ಲುಕ್‌; ರೇಷ್ಮಾ ಆದರು ರಾಗಿಣಿ

05:30 PM Jul 31, 2018 | Sharanya Alva |

ಇಷ್ಟು ದಿನ ರಾಗಿಣಿಯನ್ನು ನೀವು ಗ್ಲಾಮರಸ್‌ ಪಾತ್ರಗಳಲ್ಲಿ ನೋಡಿದ್ದೀರಿ. ಆದರೆ, ಟೆರರಿಸ್ಟ್‌ ಆಗಿ ನೋಡಿರಲಿಕ್ಕಿಲ್ಲ. ಈಗ ಆ ಅವಕಾಶವೂ ಸಿಕ್ಕಿದೆ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಇದು ರಾಗಿಣಿಯ ಹೊಸ ಸಿನಿಮಾ ಸುದ್ದಿ. 

Advertisement

ರಾಗಿಣಿ “ಟೆರರಿಸ್ಟ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಾರೆಂಬ ಸುದ್ದಿಯನ್ನು ನೀವು ಈ ಹಿಂದೆಯೇ ಓದಿರುತ್ತೀರಿ. ಆದರೆ, ಅವರ ಗೆಟಪ್‌ ಹೇಗಿರುತ್ತದೆ, ಯಾವ ತರಹ ಕಾಣಿಸಿಕೊಂಡಿದ್ದಾರೆಂಬ ಕುತೂಹಲ ಸಹಜ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ರಾಗಿಣಿ ಈ ಚಿತ್ರದಲ್ಲಿ ರೇಷ್ಮಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. 

ಈ ಚಿತ್ರಕ್ಕಾಗಿ ರಾಗಿಣಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರಂತೆ. ಪಿ.ಸಿ.ಶೇಖರ್‌ ಈ ಚಿತ್ರದ ನಿರ್ದೇಶಕರು. ಬಾಂಬ್‌ ಬ್ಲಾಸ್ಟ್‌ ಆದಾಗ ನಡೆಯುವ ಘಟನೆಗಳ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ರಾಗಿಣಿ ಬಹುತೇಕ ಒಂದೇ ಕಾಸ್ಟೂಮ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೆಚ್ಚು ಮಾತನಾಡುವ ರಾಗಿಣಿಗೆ ಇಲ್ಲಿ ಮಾತು ಕಡಿಮೆ. ಅವರ ಮೌನಕ್ಕೆ ಹಿನ್ನೆಲೆ ಸಂಗೀತದ ಮೂಲಕ ಅರ್ಥ ನೀಡಲಾಗಿದೆಯಂತೆ. ಇಲ್ಲಿ ಮನುಷ್ಯತ್ವದ ಬೆಲೆ ಹಾಗೂ ಶಾಂತಿಗಾಗಿ ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದನ್ನು ಕಟ್ಟಿಕೊಡಲಾಗಿದೆ. 

ಚಿತ್ರವನ್ನು ಇನ್‌ವೆಂಚರ್‌ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ಅಲಂಕಾರ ಸಂತಾನ ನಿರ್ಮಿಸಿದ್ದಾರೆ. ಮುರಳಿ ಕ್ರಿಶ್‌ ಕ್ಯಾಮೆರಾ, ಪ್ರದೀಪ್‌ ವರ್ಮಾ ಸಂಗೀತ ಚಿತ್ರಕ್ಕಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next