Advertisement

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

03:35 PM May 21, 2024 | Team Udayavani |

ನಟಿ ರಾಗಿಣಿ ಭರ್ಜರಿಯಾಗಿ ಕುಣಿದಿದ್ದಾರೆ. ಇವರಿಗೆ ಸಂಜು ಹಾಗೂ ಗೀತಾ ಕೂಡಾ ಸಾಥ್‌ ನೀಡಿದ್ದಾರೆ. ಹೌದು, ನಟಿ ರಾಗಿಣಿ “ಸಂಜು ವೆಡ್ಸ್‌ ಗೀತಾ-2′ ಚಿತ್ರದ ಹಾಡೊಂದರಲ್ಲಿ ಸ್ಟೆಪ್‌ ಹಾಕಿದ್ದಾರೆ. ಕುಂಬಳಗೋಡಿನ ಬಿಜಿಎಸ್‌ ಹೈಸ್ಕೂಲಿನ ಗ್ಲಾಸ್‌ ಹೌಸ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. 200 ರಿಂದ 250 ಜನ ಡಾನ್ಸರ್ಸ್‌ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್‌ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್‌, ಒಂದು ಹಾಡಿನ ಪ್ಯಾಚ್‌ ವರ್ಕ್‌ ಮಾತ್ರವೇ ಬಾಕಿಯಿದೆ. ಈ ಹಾಡಿನಲ್ಲಿ ನಾಯಕ ಕಿಟ್ಟಿ ಹಾಗೂ ನಾಯಕಿ ರಚಿತಾ ಕೂಡಾ ಕಾಣಿಸಿಕೊಂಡಿದ್ದಾರೆ.

Advertisement

ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ಪ್ರೇಮಿಗಳ ಪ್ರೇಮಕಥೆ ಈ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಸಂಕಲನ ಮುಗಿದಿದ್ದು, ಡಬ್ಬಿಂಗ್‌ ಕೂಡ ಕೊನೆಯ ಹಂತದಲ್ಲಿದೆ. ಚಿತ್ರಕ್ಕೆ ಸ್ವಿಟ್ಜರ್‌ಲ್ಯಾಂಡ್‌ನ‌ಲ್ಲಿ 15 ದಿನ ಹನ್ನೊಂದು ಲೊಕೇಶನ್‌ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ.

ಜೊತೆಗೆ ಕುಣಿಗಲ್‌ನ ಯುಬಿ ಸ್ಟೆಡ್‌ ಫಾರಂನಲ್ಲಿ ಸುಮಾರು 5 ದಿನಗಳವರೆಗೆ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ ಸಮಾರಂಭ ಮಾಡಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ನಿರ್ಮಾಪಕ ಛಲವಾದಿ ಕುಮಾರ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next