ಕುದೂರು : ಸರ್ಕಾರ ರಾಗಿಗೆ ಬೆಂಬಲ ಬೆಲೆ ನೀಡಿ ರೈತರಿಂದ ರಾಗಿ ಖರೀದಿಸಲು ಎಲ್ಲಾ ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿದೆ ಮಾಗಡಿ ತಾಲೂಕಿನ ಹೋಬಳಿ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದೆ. ಸೋಲೂರು ಹೋಬಳಿ ಗದ್ದಿಗೆ ಮಠಕ್ಕೆ ತೆರಳುವ ರಸ್ತೆಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ .ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿರುವುದರಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ರೈತರು ರಾಗಿ ತರುತ್ತಾರೆ .
ರೈತರು 50 ಕೆಜಿ ಮೂಟೆಗಳಲ್ಲಿ ರಾಗಿ ತರುತ್ತಿದ್ದು. ಮೂಟೆ ತೂಕ ಸೇರಿದಂತೆ 51 ಕೆ.ಜಿ ಪೂರೈಸಬೇಕಿದೆ. ಆದರೆ ಖರೀದಿ ಕೇಂದ್ರದ ನೌಕರರು 52 ಕೆ.ಜಿ ರಾಗಿ ತರಬೇಕು ಎಂದು ಸೂಚಿಸುವ ಕಾರಣ ರೈತರು ಚೀಲ ಸೇರಿ 52 ಕೆ.ಜಿ ರಾಗಿ ತರುತ್ತಿದ್ದಾರೆ. ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮೂಟೆ ತೂಕ ಮಾಡುವುದು ಸೇರಿದಂತೆ ಮೂಟೆ ಜೋಡಿಸುವುದಕ್ಕೆ ಹಣ ಪಡೆಯುತ್ತಿವುದು ರೈತರಿಗೆ ಹೊರೆಯಾಗಿದೆ.
ವಾಹನಗಳಲ್ಲಿ ಇರುವ ಮೂಟೆಗಳನ್ನು ಇಳಿಸಲು ಅಲ್ಲಿನ ನೌಕರರು ಒಂದು ಕ್ವಿಂಟಾಲ್ ಗೆ 15 ರೂ ಗಳಂತೆ ಹಣ ಪಡೆಯುತ್ತಿದ್ದಾರೆ ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ .
ಮಾಗಡಿ ತಾಲೂಕಿನ ಖರೀದಿ ಕೇಂದ್ರದಲ್ಲಿ ಯಾವುದೇ ಟೋಕನ್ ನೀಡುವುದಿಲ್ಲ ರೈತರನ್ನು ಮೂರು-ನಾಲ್ಕು ದಿನ ನಿಲ್ಲಿಸಿ ವೇಬ್ರೀಡ್ಜ್ ನಲ್ಲಿ ತೂಕ ಹಾಕಿಸಿ ಎಂದು ಹೇಳುತ್ತಿದ್ದಾರೆ .ವೇ-ಬ್ರಿಡ್ಜ್ ಸೋಲೂರು ಗ್ರಾಮದಲ್ಲಿದೆ .ಇಲ್ಲಿಂದ ನಾಲ್ಕು ಕಿಲೋಮೀಟರ್ ಆಗುತ್ತದೆ.ಆ ವೇಬ್ರೀಡ್ಜ್ ನಲ್ಲಿ ತೂಕ ಹಾಕಿಸಿಕೊಂಡು ಬಂದರೆ ಮಾತ್ರ ರಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ .ಇದು ಯಾವ ನ್ಯಾಯ ಎಂದು ರೈತರು ಪ್ರಶ್ನಿಸಿದ್ದಾರೆ.
ಕುಣಿಗಲ್ಲು ತುಮಕೂರು ಭಾಗದಲ್ಲಿ ಅವತ್ತೆ ಅನ್ಲೋಡ್ ಮಾಡುತ್ತಾರೆ ಅಲ್ಲಿ ಯಾವುದೇ ವೇಬ್ರೀಡ್ಜ್ ತೂಕ ಇಲ್ಲ. ನಮಗೆ ಟೋಕನ್ ನೀಡಿ ಟೂಕನ್ ಪ್ರಕಾರ ರಾಗಿ ಖರೀದಿ ಕೇಂದ್ರಕ್ಕೆ ತರುತ್ತೇವೆ. ಸುಮ್ಮನೆ ಮೂರು ದಿನ ಕಾಯಿಸುತ್ತೀರಿ ಎಂದು ರೈತ ಕೃಷ್ಣಮೂರ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಊಟ ತಿಂಡಿ ಸಮಸ್ಯೆ ; ರಾಗಿ ಖರೀದಿ ಕೇಂದ್ರಕ್ಕೆ ಪ್ರತಿದಿನ ನೂರಾರು ರೈತರು ತಮ್ಮ ವಾಹನಗಳಲ್ಲಿ ರಾಗಿ ತರುತ್ತಿವುದರಿಂದ ಜೊತೆಗೆ ಮೂರು ನಾಲ್ಕು ದಿನ ಕಾಯುತ್ತಾ ಕೂರಬೇಕು. ಕೆಲವು ರೈತರು ರಾತ್ರಿ ಸಮಯದಲ್ಲಿ ರಾಗಿ ಕೇಂದ್ರಕ್ಕೆ ತರುತ್ತಾರೆ. ರಾಗಿ ಕೇಂದ್ರ ನಿರ್ಜನ ಪ್ರದೇಶದಲ್ಲಿ ಪ್ರಾರಂಭವಾಗಿದ್ದು. ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಗ್ರಾಮಗಳಿಲ್ಲಇದರಿಂದ ರೈತರಿಗೆ ನೀರು .ಊಟ .ತಿಂಡಿಗೆ ಬಹಳಷ್ಟು ಸಮಸ್ಯೆಯಾಗಿದೆ .ಶೌಚಾಲಯ ವ್ಯವಸ್ಥೆಯಿಲ್ಲ ಬೇಸಿಗೆ ಕಾಲವಾಗಿದ್ದರಿಂದ ಬಿಸಿಲಿನ ತಾಪದಲ್ಲಿ ರೈತರು ಬಳಲುವಂತಾಗಿದೆ ಸಮಸ್ಯೆ ಬಗೆಹರಿಸುವಲ್ಲಿ ನಿಟ್ಟಿನಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು. ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ರೈತರ ಆಕ್ರೋಶ .
ಇದನ್ನೂ ಓದಿ : ಬಜೆಟ್ ನಲ್ಲಿ ಸರಕಾರಿ ನೌಕರರ ಸಂಪೂರ್ಣ ಕಡೆಗಣನೆ: ಸಚಿವಾಲಯ ನೌಕರರ ಸಂಘ ವಿರೋಧ
ಅನ್ಲೋಡ್ ಚಾರ್ಜ್ ಎಂದು 15 ರೂ.ಹಣ ಕೊಡಬೇಕು .ಸರ್ಕಾರದಿಂದ ಇವರಿಗೆ ಸಂಬಳ ಲಭಿಸುತ್ತದೆ ಆದರೆ ಏಕೆ ರೈತರಿಂದ ಒಂದು ವಾಹನಕ್ಕೆ 100 ಟೀ ಕಾಸು ಎಂದು ವಸೂಲಿ ಮಾಡುತ್ತಿದ್ದಾರೆ ಇದೊಂದು ದೊಡ್ಡ ದಂಧೆಯಾಗಿದೆ.
– ರೈತಗಂಗರಾಜು
ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಮೂಟೆ ಜೂಡಿಸಲು ಹಣ ಪಡೆಯಲಾಗುತ್ತದೆ.ಇಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ.ರೈತರು ಊಟ.ತಿಂಡಿ.ನೀರಿಗೆ ಹಾಗೂ ಶೌಚಾಲಯಕ್ಕೆ ಪರದಾಡುವ ಸ್ಥಿತಿ ಇದೆ.
– ಕೃಷ್ಣಮೂರ್ತಿ. ರೈತ.
ನಾವು ಇಲ್ಲಿ ಸದಾಭಿಪ್ರಾಯದಿಂದ ಕೆಲಸ ಮಾಡುತ್ತಿದ್ದೇವೆ.ರೈತರಿಗೆ ಅನ್ಯಾಯ ವಾಗಬಾರದೆಂದು ವೇಬ್ರೀಡ್ಜ್ ನಲ್ಲಿ ತೂಕ ಹಾಕಿಸಿಕೂಂಡು ಬನ್ನಿಎಂದು ಹೇಳಿದ್ದೇವೆ.ರೈತರಿಗೆ ಟೂಕನ್ ಕೂಡ ವಿತರಣೆ ಮಾಡಿದ್ದೇವೆ.ಮೂರು ದಿನಗಳಿಂದ ಕಾಯಿರಿ ಎಂದುನಾವು ಹೇಳಿಲ್ಲ.ರೈತರು ಟೂಕನ್ ಪ್ರಕಾರ ಬರುತ್ತಿಲ್ಲ.
– ಜಯರಾಂ.ರಾಗಿ ಕೇಂದ್ರದ ಅಧಿಕಾರಿ