ಹೊಸದಿಲ್ಲಿ: ರಾಹುಲ್ ದ್ರಾವಿಡ್‌ರಂತೆ ಆಟವಾಡಿ, ನವಜೋತ್ ಸಿಂಗ್ ಸಿಧು ಅವರಂತೆ ಆಡಬೇಡಿ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಸೆಂಟ್ರಲ್ ಬ್ಯಾಂಕ್‌ನ ಕಾರ್ಯಕಾರಿ ಮಂಡಳಿಗೆ ಸಲಹೆ ನೀಡಿದ್ದಾರೆ.
ಎಕನಾಮಿಕ್ಸ್ ಟೈಮ್ಸ್‌ಗೆ ಸಂದರ್ಶನ ನೀಡಿದ ರಾಜನ್ ಅವರು ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವಿನ ಬಿರುಕಿನ ಕುರಿತು ಮಾತನಾಡಿ ಈ ಹೋಲಿಕೆ ಮಾಡಿದ್ದಾರೆ.
ಸೆಂಟ್ರಲ್ ಬ್ಯಾಂಕ್‌ನ ಸ್ವಾಯತ್ತತೆ ಪರ ವಕಾಲತ್ತು ವಹಿಸಿದ ರಾಜನ್ ದೇಶದ ಹಿತಾಸಕ್ತಿಯ ಉದ್ದೇಶದಿಂದ ಎರಡೂ ಕಡೆಯ ಉದ್ದೇಶವನ್ನು ಗೌರವಿಸಬೇಕು ಎಂದರು.
ಆರ್‌ಬಿಐ ಮಂಡಳಿಯ ಪಾತ್ರ ಬದಲಾವಣೆಯ ವಿಚಾರದ ಕುರಿತು ಕಾಳಜಿ ತೋರಿದ ರಾಜನ್ ರಾಹುಲ್ ದ್ರಾವಿಡ್ ರೀತಿಯಲ್ಲಿ ಆಟವಾಡಬೇಕು , ಕೆಲ ಅರ್ಥದಲ್ಲಿ ತರಬೇತುದಾರರಾಗಲು ಆದರೆ ನವಜೋತ್ ಸಿಧು ಅವರಂತೆ ನಿಶ್ಚಿತವಾಗಿ ಕಾರ್ಯಾಚರಣೆ ನಿರ್ಧಾರಗಳನ್ನು ಮಾಡಬಾರದು ಎಂದರು.
ಸಿಎನ್‌ಬಿಸಿ ಟಿವಿ 18 ಜೊತೆ ಮಾತನಾಡಿದ ರಾಜನ್ ಆರ್‌ಬಿಐನ ಪಾತ್ರ ಸೀಟ್ ಬೆಲ್ಟ್ ಇದ್ದ ಹಾಗೆ, ಸರಿಯಾಗಿ ಅದಿಲ್ಲವಾದರೆ ಅವಘಡಕ್ಕೆ ಕಾರಣವಾಗುತ್ತದೆ ಎಂದರು.
ಕಳೆದ ಕೆಲ ದಿನಗಳಿಂದ ಸರ್ಕಾರ ಮತ್ತು ಆರ್‌ಬಿಐನ ನಡುವೆ ಬಿರುಕು ಮೂಡಿದ್ದು, ಸೆಂಟ್ರಲ್ ಬ್ಯಾಂಕ್‌ನ ಸ್ವಾಯತ್ತತೆಗೆ ಧಕ್ಕೆ ತರುವುದು ಸಂಭಾವ್ಯ ದುರಂತಕ್ಕೆ ಕಾರಣವಾಗುತ್ತದೆ ಎಂದು ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ಹೇಳಿಕೆ ನೀಡಿದ್ದರು.
ಕೆಲ ಆರ್ಥಿಕ ನೀತಿಗಳನ್ನು ಮುಂದಿನ ಲೋಕಸಭಾ ಚುನಾವಣೆಯ ಒಳಗೆ ಸಡಿಲಿಸಿ, ಬದಲಾವಣೆ ಮಾಡಲು ಸರಕಾರ ಮನವಿ ಮಾಡಿತ್ತು.