Advertisement

Raghupathi Bhat ಜನರ ಮನಸ್ಸಿನಿಂದ ನನ್ನನ್ನು ಉಚ್ಚಾಟಿಸಲು ಸಾಧ್ಯವಿಲ್ಲ

12:54 AM Jun 01, 2024 | Team Udayavani |

ಉಡುಪಿ: ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ನಾನು ಮಾಡಿದ ಸೇವಾ ಕಾರ್ಯಗಳಿಂದ ಜನ ನನಗೆ ಅವರ ಮನಸ್ಸಿನಲ್ಲಿ ಸ್ಥಾನ ನೀಡಿದ್ದಾರೆ. ಇಂದು ನಾನು ಹೋದ ಎಲ್ಲ ಭಾಗಗಳಲ್ಲಿಯೂ ಜನ ನನ್ನನ್ನು ಪ್ರೀತಿಯಿಂದ ಬರಮಾಡಿ ಕೊಳ್ಳುತ್ತಿದ್ದಾರೆ. ಜನರ ಮನಸ್ಸಿನಿಂದ ನನ್ನನ್ನು ಉಚ್ಚಾಟಿಸಲು ಯಾರಿಗೂ ಸಾಧ್ಯವಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್‌ ಅವರು ಹೇಳಿದರು.

Advertisement

ಉಡುಪಿ ಹಾಗೂ ಕುಂದಾಪುರ ಭಾಗಗಳಲ್ಲಿ ಬಾರ್‌ಕೌನ್ಸಿಲ್‌, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಕಂಪೆನಿಗಳಲ್ಲಿ ಅವರು ಮತದಾರರ ಸಭೆ ನಡೆಸಿ ಮತ ಯಾಚಿಸಿದರು.

ಶಾಸಕನಾಗಿದ್ದಾಗ ಎಲ್ಲ ವರ್ಗದ ಜನತೆಯ ಆಶೋತ್ತರಗಳಿಗೆ ಪ್ರಾಮಾ ಣಿಕವಾಗಿ ಸ್ಪಂದಿಸಿದ್ದೇನೆ.

ಎಲ್ಲರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ‌ರು.

ಹಿಜಾಬ್‌ ವಿವಾದ ಬಂದಾಗ ಶಾಲೆಯ ಒಳಗೆ ಸಮಾನತೆ ಕಾಯ್ದು ಕೊಳ್ಳುವ ದೃಷ್ಟಿಯಿಂದ ಸಮವಸ್ತ್ರಕ್ಕೆ ಆದ್ಯತೆ ನೀಡಲು ಒತ್ತಾಯಿಸಿದ್ದೆ. ಆ ವಿಷಯದಲಲಿ ನನ್ನನ್ನು ಇಂದು ವ್ಯಂಗ್ಯ ಮಾಡಿದವರಿಗೆ ಜನ ಉತ್ತರ ನೀಡುತ್ತಾರೆ.
ಎಲ್ಲರೂ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದಾಗ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದ ಅವರು, ಇನ್ನೂ ಕೆಲಸ ಮಾಡುವ ತುಡಿತ ಇರುವ ನನಗೆ ಸೇವೆ ಮಾಡಲು ಬೆಂಬಲಿಸಿ ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next