Advertisement

ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ… ಪದವೀಧರರು ನನ್ನ ಕೈ ಬಿಡಲಾರರು: ರಘುಪತಿ ಭಟ್‌

11:45 PM Jun 02, 2024 | Team Udayavani |

ಉಡುಪಿ: ನಾನು 3 ಬಾರಿ ಶಾಸಕನಾಗಿ ಜನತೆಗೆ ಸ್ಪಂದಿಸಿದ ರೀತಿ, ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದಲ್ಲಿ ನಡೆಸಿದ ವಿನೂತನ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವಿರುವ ನೈಋತ್ಯ ಪದವೀಧರರ ಕ್ಷೇತ್ರದ ಮತದಾರರು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್‌ ಹೇಳಿದರು.

Advertisement

ನಾನು ರಾಜಕೀಯ ಮಾಡಲು ಅಥವಾ ಯಾರನ್ನೋ ಸೋಲಿಸಲು ಸ್ಪರ್ಧಿಸುತ್ತಿಲ್ಲ. ಜನರ ಸೇವೆಗಾಗಿ ಪರಿಷತ್‌ಗೆ ಆಯ್ಕೆ ಬಯಸಿದ್ದೇನೆ. 5 ಜಿಲ್ಲೆ ಹಾಗೂ ದಾವಣಗೆರೆಯ ಮೂರು ತಾಲೂಕುಗಳನ್ನೊಳಗೊಂಡ ಭೌಗೋಳಿಕವಾಗಿ ಅತಿ ದೊಡ್ಡ ಕ್ಷೇತ್ರವಾಗಿರುವ ಇಲ್ಲಿನ ಜನತೆ ತೋರಿಸಿದ ಪ್ರೀತಿಯಿಂದಾಗಿ ನನ್ನ ಗೆಲುವಿನ ವಿಸ್ವಾಸ ಇಮ್ಮಡಿಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ನಿವೃತ್ತ ಸೈನಿಕರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಉದ್ಯಮಗಳನ್ನು ಒಳಗೊಂಡ ಈ ಕ್ಷೇತ್ರದ ಪದವೀಧರರಿಗೆ ಅವರವರ ಶೈಕ್ಷಣಿಕ ಅರ್ಹತೆಗನುಗುಣವಾಗಿ ಉದ್ಯೋಗ ಮತ್ತು ಉದ್ಯಮಕ್ಕೆ ಸಹಕಾರಿಯಾಗಬಲ್ಲ ಸವಲತ್ತುಗಳು ಮತ್ತು ಪೂರಕವಾದ ಸರಕಾರದ ಶಾಸನಗಳು ರೂಪಿತವಾಗಿ ಜಾರಿಯಾಗುವ ಅವಶ್ಯಕತೆಗಳನ್ನು ಮನಗಂಡಿರುತ್ತೇನೆ. ಶಿಕ್ಷಕರ ಮತ್ತು ಸರಕಾರಿ ನೌಕರರ ಬೇಡಿಕೆ ಹಾಗೂ ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next