Advertisement

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

12:01 AM May 29, 2024 | Team Udayavani |

ಉಡುಪಿ: ಬಿ. ಎಸ್‌. ಯಡಿಯೂರಪ್ಪ ತಮ್ಮ ಮಗನನ್ನು ರಾಜ್ಯಾಧ್ಯಕ್ಷ ಮಾಡಲು 6 ತಿಂಗಳು ಕಾದು ದಿಲ್ಲಿ-ಕರ್ನಾಟಕ ಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಪರ 40ಕ್ಕೂ ಅಧಿಕ ದಿನಗಳ ಕಾಲ ನಿರಂತರವಾಗಿ ಮಾಜಿ ಶಾಸಕರಾದ ರಘುಪತಿ ಭಟ್‌ ದುಡಿದಿದ್ದಾರೆ.

Advertisement

ಪಕ್ಷ ನಿಷ್ಠೆಯಿಂದ ದುಡಿದಿರುವುದಕ್ಕೆ ಅವರಿಗೆ ಟಿಕೆಟ್‌ ನಿರಾಕರಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಡಾ| ಧನಂಜಯ ಸರ್ಜಿ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿ ದವರು ಎಂಬ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ತನ್ನ ಮಗನಿಗೆ ಅನುಕೂ ಲವಾಗಲಿದೆ ಎಂದು ಯಡಿ ಯೂರಪ್ಪ ಈ ನಿರ್ಧಾರ ಮಾಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ ಏನೂ ಆಗದು. ಲಿಂಗಾಯತ ಸಮು ದಾಯದವರು ಬಿಜೆಪಿಗೆ ಮತ ನೀಡುವುದಿಲ್ಲ ಎಂಬ ಭ್ರಮೆ ಯಲ್ಲಿ ಕೇಂದ್ರದ ನಾಯಕರಿದ್ದಾರೆ. ವಾಸ್ತವ ಹಾಗಿಲ್ಲ. ವಿಜಯೇಂದ್ರ ಅಕಸ್ಮಾತ್‌ ಅಧ್ಯಕ್ಷರಾಗಿದ್ದಾರೆ. ಈಗ ಅಪ್ಪ ನನ್ನು ಮಗ ಹೊಗಳುವುದು, ಮಗನನ್ನು ಅಪ್ಪ ಹೊಗಳುವುದಾಗಿದೆ ಎಂದರು.

ರಘುಪತಿ ಭಟ್‌ ವಿಧಾನ ಪರಿಷತ್‌ ಚುನಾವಣೆ ಟಿಕೆಟ್‌ ಭರವಸೆ ನೀಡಿಲ್ಲ ಎಂಬುದನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಶ್ರೀಕೃಷ್ಣ ಮಠಕ್ಕೆ ಬಂದು ಆಣೆ ಪ್ರಮಾಣ ಮಾಡಲಿ. ಭಟ್‌ ಪಕ್ಷೇತ ರರಾಗಿ ಸ್ಪರ್ಧಿಸಲು ಅವರಿಗೆ ಪಕ್ಷದಿಂದ ಆದ‌ ಅನ್ಯಾಯವೇ ಕಾರಣ ಎಂದರು.

Advertisement

ಪ್ರಮುಖರಾದ ಶಿವರಾಮ ಉಡುಪ, ಉಮೇಶ್‌ ಆರಾಧ್ಯ, ಉಪೇಂದ್ರ ನಾಯಕ್‌, ಮಹೇಶ್‌ ಪೂಜಾರಿ ಇದ್ದರು.

ಸಿಎಂ, ಗೃಹಮಂತ್ರಿ ಸತ್ತಿದ್ದಾರೆಯೇ?
ಮಂಗಳೂರಿನ ಮುಖ್ಯರಸ್ತೆಯ ಮೇಲೆ ನಮಾಜ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ, ಇದು ಟಿಪ್ಪು ರಾಜ್ಯ ಎನ್ನುತ್ತಾರೆ. ಉಡುಪಿಯಲ್ಲಿ ಗ್ಯಾಂಗ್‌ವಾರ್‌ ಆಗುತ್ತದೆ. ಚನ್ನಗಿರಿ ಯಲ್ಲಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತಾರೆ. ಹುಬ್ಬಳ್ಳಿಯಲ್ಲಿ ಕೊಲೆಯಾ ಗುತ್ತದೆ. ಹಾಗಾದರೆ ರಾಜ್ಯ ಸರಕಾರ, ಪೊಲೀಸ್‌ ಇಲಾಖೆ, ಮುಖ್ಯಮಂತ್ರಿ, ಗೃಹಸಚಿವರು ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎನ್ನುವ ಪ್ರಶ್ನೆ ಕಾಡುವು ದಿಲ್ಲವೇ? ರಸ್ತೆ ಮೇಲೆ ನಮಾಜ್‌ ಮಾಡಿ ದವರ ಮೇಲೆ ದೇಶದ್ರೋಹಿ ಮತ್ತು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಜಾತೀಯತೆ, ಸರ್ವಾಧಿಕಾರದತ್ತ ಬಿಜೆಪಿ: ಈಶ್ವರಪ್ಪ
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಹಿಂದುತ್ವದಿಂದ ಜಾತೀಯತೆಗೆ, ಪಕ್ಷನಿಷ್ಠೆಯಿಂದ ಕುಟುಂಬ ರಾಜಕಾರ ಣಕ್ಕೆ ಹಾಗೂ ಸಾಮೂಹಿಕದಿಂದ ಸರ್ವಾಧಿಕಾರಕ್ಕೆ ಬದಲಾಗಿದೆ. ಒಂದೆಡೆ ರಾಮ-ಲಕ್ಷ್ಮಣರಂತೆ ಕೇಂದ್ರ ದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿಶ್ವ ನಾಯಕರಾಗಿ ದುಡಿಯುತ್ತಿದ್ದರೆ, ರಾಜ್ಯ ಬಿಜೆಪಿಯನ್ನು ಕೆಲವರು ತಮ್ಮ ಆಸ್ತಿಯಂತೆ ಬಳಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಟೀಕಾಪ್ರಹಾರ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಯಡಿಯೂರಪ್ಪ ಮತ್ತವರ ಕುಟುಂಬದ ಹತ್ತಿರ ಇರುವವರಿಗೆ ಮಾತ್ರವೇ ಬಿಜೆಪಿಯಲ್ಲಿ ಮಣೆ ಎಂಬ ಸ್ಥಿತಿ ಉಂಟಾಗಿದೆ ಎಂದರು.

ಉಚ್ಚಾಟನೆ ತಾತ್ಕಾಲಿಕ
ನನ್ನ ಒಬ್ಬರು ತಾಯಿ ಭಾರತ ಮಾತೆ, ಇನ್ನೊಂದು ತಾಯಿ ಬಿಜೆಪಿ, ಹಾಗಾಗಿ ನನ್ನನ್ನು ಪಕ್ಷದಿಂದ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ, ನನ್ನನ್ನು ಉಚ್ಚಾಟಿಸಿದ್ದಾರೆ. ಆದರೆ ಶೆಟ್ಟರ್‌ ಅವ ರನ್ನೂ ಉಚ್ಚಾಟಿಸಿದ್ದರು. ಅವರು ಕಾಂಗ್ರೆಸ್‌ ಸೇರಿ, ಅಲ್ಲಿ ವಿಧಾನ ಪರಿಷತ್‌ ಸದಸ್ಯರಾದವರು ಮರಳಿ ಬಂದು ಬಿಜೆಪಿಯಿಂದ ಸಂಸತ್ತಿಗೆ ಸ್ಪರ್ಧಿಸಿದ್ದಾರೆ. ಹಾಗಾಗಿ ನನ್ನದೂ ತಾತ್ಕಾಲಿಕ ವ್ಯವಸ್ಥೆ. ನಾನು ಯಾವತ್ತಿದ್ದರೂ ಬಿಜೆಪಿ ಎಂದರು. ರಾಜ್ಯ ಬಿಜೆಪಿಯಲ್ಲಿ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ, ಬಿಜೆಪಿಯನ್ನು ಶುದ್ಧೀಕರಣ ಮಾಡಬೇಕು, ಅದಕ್ಕಾಗಿ ನಾನು ಸಂಸತ್‌ ರಘುಪತಿ ಭಟ್‌ ಟಿಕೆಟ್‌ನಿರೀ ಕ್ಷೆಯಲ್ಲಿದ್ದರು. ಬೇರೆಯವರಿಗೆ ಕೊಡುವಾಗ ಅವರಿಗೆ ಹೇಳಿರಲೇ ಇಲ್ಲ ಎಂದು ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next