ಮುಂಬಯಿ: ನ್ಯಾಚುರಲ್ ಐಸ್‌ಕ್ರೀಂ ಸಂಸ್ಥಾಪಕ ಮೂಲ್ಕಿ ರಘುನಂದನ್ ಶ್ರೀನಿವಾಸ ಕಾಮತ್ ಅಂತಿಮ ಸಂಸ್ಕಾರ ಶನಿವಾರ ಅಂಧೇರಿ ಪಶ್ಚಿಮದ ಸೀಸರ್ ರಸ್ತೆಯ ಅಂಬೋಲಿ ರುದ್ರಭೂಮಿ ಯಲ್ಲಿ ನೆರವೇರಿತು.
ಕಾಮತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ನಿಧನ ಹೊಂದಿದ್ದರು. ಜಿಎಸ್‌ಬಿ ಸಮು ದಾಯದ ಹಿರಿಯ ಉದ್ಯಮಿ, ಧುರೀಣ, ಕೊಡುಗೈ ದಾನಿಯಾಗಿದ್ದ ಕಾಮತ್ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗಿನಿಂದ ಸಂಜೆಯ ತನಕ ಅಂಧೇರಿ ಪಶ್ಚಿಮದ ಲೋಖಂಡವಾಲಾ ಕಾಂಪ್ಲೆಕ್ಸ್‌ನ ಬ್ರೆಟನ್ ಟವರ್‌ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಭಾರೀ ಸಂಖ್ಯೆಯ ಜನತೆ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ರಘುನಂದನ್ ಕಾಮತ್ ಅವರ ಪತ್ನಿ ಪುಷ್ಪಲತಾ ಆರ್. ಕಾಮತ್, ಇಬ್ಬರು ಪುತ್ರರಾದ ಶ್ರೀನಿವಾಸ ಕಾಮತ್ ಮತ್ತು ಸಿದ್ಧಾಂತ್ ಕಾಮತ್ ಹಾಗೂ ಪರಿವಾರ, ಜಿಎಸ್‌ಬಿ ಸಮುದಾಯದ ಉದ್ಯಮಿಗಳಾದ ಸತೀಶ್ ರಾಮ ನಾಯಕ್, ಅಮಿತ್ ದಿನೇಶ್ ಪೈ, ಸಾಣೂರು ಮನೋಹರ್ ವಿ. ಕಾಮತ್, ಹಾಂಗ್ಯೊ ಐಸ್‌ಕ್ರೀಮ್‌ನ ಪ್ರದೀಪ್ ಜಿ. ಪೈ, ಟೆಂಡರ್ ಫ್ರೆಶ್‌ನ ಜಗದೀಶ್ ಶ್ರೀಧರ್ ಕಾಮತ್, ಎಂ.ಜಿ. ಕರ್ಕೆರಾ, ಬಿವಿಕೆ ರೈಸ್‌ನ ಶ್ರೀಕಾಂತ್ ಕಾಮತ್ ಸಚ್ಚರಿಪೇಟೆ, ಜಿ.ಡಿ. ರಾವ್, ಫಿರೋಜ್ ನಕ್ವೀ, ನರೇಶ್ ಎನ್. ಕುಡ್ವ, ಜಿ.ಜಿ. ಪ್ರಭು, ಯೂಥ್ ಜಿಎಸ್‌ಬಿಯ ನರೇಶ್ ಶೆಣೈ, ರವಿ ಕಿಣಿ, ಚಂದ್ರಶೇಖರ್ ಪ್ರಭು, ಫಾಝಿ ಅಸೋಸಿಯೇಟ್ಸ್ ಮಂಗಳೂರು ಇದರ ಫಜಿಲ್ ಕೆ.ಪಿ., ಫೈಝಾ ಅಂಜುಮ್ ದಂಪತಿ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗಿರೀಶ್ ಪೈ ಮತ್ತಿತರ ಗಣ್ಯರು, ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯ ನೌಕರರು ಉಪಸ್ಥಿತರಿದ್ದು, ಸಂತಾಪ ಸೂಚಿಸಿದರು.
150 ಮಳಿಗೆ
1984ರಲ್ಲಿ ಜನ್ಮ ತಾಳಿದ ನ್ಯಾಚುರಲ್ ಐಸ್ ಕ್ರೀಮ್ ಇಂದು ಕರ್ನಾಟಕ, ಗೋವಾ, ಮಹಾ ರಾಷ್ಟ್ರ, ಗುಜರಾತ್, ದಿಲ್ಲಿ ಸೇರಿ ದಂತೆ ದೇಶಾದ್ಯಂತ 150 ಮಳಿಗೆಗಳನ್ನು ಹೊಂದಿದೆ. 2015ರ ಹೊತ್ತಿಗೆ ಕಂಪೆನಿ 125 ಹಣ್ಣುಗಳ ತಿರುಳು ಇರುವ ಐಸ್‌ಕ್ರೀಮ್‌ಗಳನ್ನು ತಯಾರಿಸಿ ದೇಶದ ನಾಗರಿಕರಿಗೆ ತಲುಪಿಸಿದೆ. 11 ರಾಜ್ಯಗಳ ಮಾರುಕಟ್ಟೆಗಳನ್ನು ಗೆದ್ದ ಕೀರ್ತಿ ನ್ಯಾಚುರಲ್ ಐಸ್ ಕ್ರೀಮ್‌ಗೆ ಸಲ್ಲುತ್ತದೆ.