Advertisement

ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬಿಝಿಯಾದ ರಾಘು

07:00 PM Oct 11, 2022 | Team Udayavani |

ನಟ ವಿಜಯ ರಾಘವೇಂದ್ರ ಅಭಿನಯದ “ರಾಘು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದೆ.

Advertisement

ಶೀಘ್ರದಲ್ಲಿಯೇ “ರಾಘು’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಇದೇ ವರ್ಷದ ಕೊನೆಯೊಳಗೆ ಸಿನಿಮಾವನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ. ಇನ್ನು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಥ್ರಿಲ್ಲರ್‌ ಕಥಾಹಂದರದ “ರಾಘು’ ಸಿನಿಮಾದಲ್ಲಿ ವಿಜಯ ರಾಘ ವೇಂದ್ರ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಂ. ಆನಂದ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡು ತ್ತಿರುವ ಮೊದಲ ಸಿನಿಮಾ ಇದಾಗಿದ್ದು, “ಡಿಕೆಎಸ್‌ ಸ್ಟುಡಿ ಯೋ’, “ಕೋಟಾ ಫಿಲಂ ಫ್ಯಾಕ್ಟರಿ’ ಪ್ರೊಡಕ್ಷನ್‌ ಹೌಸ್‌ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಈ ಸಿನಿಮಾ ವನ್ನು ನಿರ್ಮಿಸುತ್ತಿದ್ದಾರೆ.

ಸಿನಿಮಾಕ್ಕೆ ಉದಯ್‌ ಲೀಲಾ ಛಾಯಾಗ್ರಹಣ, ವಿಜೇತ್‌ ಚಂದ್ರ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಸೂರಜ್‌ ಜೋಯಿಸ್‌ ಸಂಗೀತ ನಿರ್ದೇಶನ ವಿದ್ದು, ರಿತ್ವಿಕ್‌ ಮುರಳಿಧರ್‌ ಹಿನ್ನೆಲೆ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next