Advertisement

ರಘು ಶಾಸ್ತ್ರಿ ಹೊಸ ಚಿತ್ರ ಟಕ್ಕರ್‌

12:58 PM Jan 15, 2018 | Team Udayavani |

ವಿನಯ್‌ ರಾಜಕುಮಾರ್‌ ಅಭಿನಯದ “ರನ್‌ ಅಂಟೋನಿ’ ಚಿತ್ರ ನಿರ್ದೇಶಿಸಿದ ರಘು ಶಾಸ್ತ್ರಿ ಈಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಅದು “ಟಕ್ಕರ್‌’. ಈಗಾಗಲೇ ಫೋಟೋಶೂಟ್‌ ಕೂಡಾ ಆಗಿದೆ. ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ನೋಡಿದಾಗ ಇದು ಪಕ್ಕಾ ಆ್ಯಕ್ಷನ್‌ ಸಿನಿಮಾವೆಂಬುದು ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಮನೋಜ್‌ ನಾಯಕರಾಗಿ ನಟಿಸುತ್ತಿದ್ದಾರೆ. ನಟ ದರ್ಶನ್‌ ಅವರ ಸಂಬಂಧಿಯಾಗಿರುವ ಮನೋಜ್‌ ಈಗ “ಟಕ್ಕರ್‌’ ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರವನ್ನು ನಾಗೇಶ್‌ ಕೋಗಿಲು ನಿರ್ಮಿಸುತ್ತಿದ್ದಾರೆ. ಈ ಹಿಂದೆ  ಇವರು “ಹುಲಿರಾಯ’ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. 

Advertisement

“ರನ್‌ ಅಂಟೋನಿ’ ಮೂಲಕ ಎಂಟ್ರಿಕೊಟ್ಟ ರಘು ಶಾಸ್ತ್ರಿ ಈಗ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಮಾಡಲು ಹೊರಟಂತಿದೆ. “ಲೈಫ್ ಜೊತೆಗೊಂದ್‌ ಸೆಲ್ಫಿ’ ಚಿತ್ರದಲ್ಲೂ ರಘು ಶಾಸ್ತ್ರಿ ತೊಡಗಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next