Advertisement

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

06:24 PM Apr 29, 2024 | Team Udayavani |
ವಿಜಯಪುರ : ಕಾಂಗ್ರೆಸ್ ಪಕ್ಷ ನನ್ನನ್ನು ಅತ್ಯಂತ ಗೌರದಿಂದ ನಡಸಿಕೊಂಡಿದೆ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್, ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಚೊಂಬು ಖಾತ್ರಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಟೀಕಿಸಿದರು.
ಸೋಮವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದ್ದರಿಂದ ಟಿಕೆಟ್ ಕೊಟ್ಟ ಮೇಲೆ ಸೋತದ್ದು ಏಕೆ, ಮೇಲ್ಮನೆ ಶಾಕರಾಗಿ ನೇಮಿಸಿದ ಮೇಲೆಯೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇಕೆ ಎಂಬುದಕ್ಕೆ ಶಟ್ಟರ್ ಉತ್ತರಿಸಬೇಕು. ಈ ಬಾರಿ ಬೆಳಗಾವಿ ಜನರು ಕೊಡುವ ಚೊಂಬು ಹಿಡಿದುಕೊಂಡು ಶೆಟ್ಟರ್ ಹುಬ್ಬಳ್ಳಿಗೆ ಹೋಗಬೇಕಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದಲ್ಲಿರುವ ನನ್ನ ಬಗ್ಗೆ ಕನಿಕರದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಅಗತ್ಯವಿಲ್ಲ, ಕಾಂಗ್ರೆಸ್ ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎಂದರು.
ನಾನು ಬಿಜೆಪಿ ಪಕ್ಷಕ್ಕೆ ಸೇರುವ ಹಂತದ ವರೆಗೆ ಅಥಣಿ ಭಾಗದಲ್ಲಿ ಓರ್ವ ಗ್ರಾ.ಪಂ. ಸದಸ್ಯ ಇರಲಿಲ್ಲ. ನಾನು ಯಾವುದೇ ಸಿ.ಡಿ., ಭ್ರಷ್ಟಾಚಾರದ ಹಗರಣದಲ್ಲಿ ಇರಲಿಲ್ಲ. ಆದರೂ ಯಾವ ಕಾರಣಕ್ಕೆ ನನ್ನನ್ನು ಸಂಪುಟದಿಂದ ಕೈಬಿಟ್ಟರು ಎಂದು ಬಿಜೆಪಿ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.
 ಬಿಜೆಪಿ ತೊತೆದ ನನ್ನನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ದು ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟಿದೆ, ಸ್ಟಾರ್ ಪ್ರಚಾರಕ ಗೌರವ ನೀಡಿದೆ. ಹೀಗಾಗಿ ಕಾಂಗ್ರೆಸ್ ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು.
ಕಳೆದ ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದ ಸಕ್ರೀಯನಾಗಿ ನಾನು ಅಲ್ಲಿನ ಆಳ-ಅಗಲ ನೋಡಿದ್ದೇನೆ, ಚುನಾವಣೆ ಬಂದಾಗ ಜಾತಿ, ಜಾತಿ ನಡುವೆ ವೈಷಮ್ಯ ಬಿತ್ತುವುದು ಬಿಜೆಪಿ ಸ್ವಭಾವ. ಇದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ ಎಂದು ಸವದಿ ಹೇಳಿದರು.
ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಭಾಷಣಗಳನ್ನು ಅವಲೋಕಿಸಿದರೆ ಹತ್ತು ವರ್ಷಗಳಲ್ಲಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದು, ಸೋಲುವ ಭೀತಿ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದೆ. ಮಣಿಪುರದ ಹೇಯ ಕೃತ್ಯದಬಗ್ಗೆ ಎಲ್ಲಿಯೂ ಧ್ವನಿ ಎತ್ತದ ಮೋದಿ ರಾಜ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಪ್ರಧಾನಿ ಮೋದಿ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಯಿಂದ ದಿವಾಳಿ ಆಗಲಿದೆ ಎಂದಿದ್ದರು. ಆದರೆ ಕರ್ನಾಟಕ ರಾಜ್ಯದ ಜನರು ಬೆಲೆ ಏರಿಕೆ ಈ ಸಂಕಷ್ಟದಲ್ಲೂ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಗ್ಯಾರಂಟಿ ಯೋಜನೆ ಜಾರಿಗೆ ತಂದು ಬಡವರಿಗೆ ಅನುಕೂಲ ಮಾಡಿದ್ದನ್ನು ಸಹಿಸದೇ ಟೀಕೆ ಮಾಡುತ್ತಿದ್ದಾರೆ ಎಂದರು.
ಕಿತ್ತೂರು-ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ವಿಜಯ ಸಾಧಿಸಲಿದ್ದು, ವಿಜಯಪುರ ಕ್ಷೇತ್ರದಿಂದ ರಾಜು ಆಲಗೂರ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವುದ ಸೂರ್ಯ-ಚಂದ್ರರು ಇರುಷ್ಟೇ ಸತ್ಯ ಎಂದರು.
2014 ರಲ್ಲಿ ಗುಜರಾತ್ ಮಾದರಿ ಜಾರಿಗೆ ತರುವುದಾಗಿ ಹೇಳಿದ್ದರು. ವಿದೇಶದಿಂದ ಕಪ್ಪುಹಣ ತಂದು ಸಾಲ ತೀರಿಸುವುದು, ರೈತರ ಆದಾಯ ದ್ವಿಗುಣ, ನಿರುದ್ಯೋಗ ನಿವಾರಣೆ ಕೋಟಿ ಉದ್ಯೋಗ ಸೃಷ್ಟಿ, ದೇಶದ ನದಿಗಳ ಜೋಡಣೆ ಮೂಲಕ ವಾಜಪೇಯಿ ಕನಸು ನನಸು ಮಾಡುವ ಭರವಸೆ ನಂಬಿ ರೈತರು ಬಿಜೆಪಿ ಪಕ್ಷವನ್ನು ಬೆಂಬಲಿಸಿದರು. ಅಧಿಕಾರಕ್ಕೆ ಬಂದಮೇಲೆ ಯಾವುದನ್ನೂ ಈಡೇರಿಸದ ಕಾರಣ ಈ ಬಾರಿ ಸೋಲು ಖಚಿತ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next