Advertisement

‘ನಾನು ಆರೋಗ್ಯವಾಗಿದ್ದೇನೆ’…ಹರಿಸಿದ ನಿಮಗೆ ಧನ್ಯವಾದಗಳು; ರಾಘವೇಂದ್ರ ರಾಜಕುಮಾರ್

12:59 PM Feb 19, 2021 | Team Udayavani |

ಬೆಂಗಳೂರು : ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ಸೇರಿದ್ದ ದೊಡ್ಡಮನೆಯ ನಟ ರಾಘವೇಂದ್ರ ರಾಜಕುಮಾರ್ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿರುವ ಅವರು ತಮ್ಮ ಆರೋಗ್ಯ ಚೇತರಿಕೆಗೆ ಹರಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

Advertisement

ಫೆ.16 ‘ಬೆಳಕು’ ಚಿತ್ರದ ಶೂಟಿಂಗ್ ವೇಳೆ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಏರುಪೇರಾಗಿತ್ತು. ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ತಕ್ಷಣವೇ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ರಾಘಣ್ಣ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದು ಟ್ವಿಟರ್ ನಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಟ್ವೀಟ್ ಮಾಡಿ, ನಾನು ಶೀಘ್ರ ಗುಣಮುಖನಾಗಲೆಂದು ಹರಿಸಿದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next