Advertisement

ಕೋಟ ಅವಳಿ ಕೊಲೆ ಪ್ರಕರಣ:ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ ಜಾಮೀನು

01:34 PM Jul 18, 2019 | Nagendra Trasi |

ಕೋಟ: ಇಲ್ಲಿನ ಮಣೂರಿನಲ್ಲಿ ಜ. 26ರಂದು ನಡೆದಿದ್ದ ಸ್ನೇಹಿತರಿಬ್ಬರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಉಡುಪಿ ಜಿ.ಪಂ. ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಗೆಳೆಯರಾದ ಯತೀಶ್‌ ಕಾಂಚನ್‌ ಹಾಗೂ ಭರತ್‌ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 18 ಮಂದಿ ಆರೋಪಿಗಳಲ್ಲಿ ರಾಘವೇಂದ್ರ ಕಾಂಚನ್‌ ಓರ್ವನಾಗಿದ್ದು, ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದಡಿಯಲ್ಲಿ ಬಂಧಿತನಾದ ಪೊಲೀಸ್‌ ಪೇದೆ ವೀರೇಂದ್ರ ಆಚಾರ್ಯನ ಜಾಮೀನು ಅರ್ಜಿ ಇದೇ ಸಂದರ್ಭ ತಿರಸ್ಕೃತ ಗೊಂಡಿದೆ. ಕಾನೂನು ಪ್ರಕ್ರಿಯೆಗಳ ಅನಂತರ 2-3 ದಿನಗಳಲ್ಲಿ ಕಾಂಚನ್‌ ಬಿಡುಗಡೆಗೊಳ್ಳಲಿದ್ದಾನೆ ಎನ್ನಲಾಗಿದೆ.

ಕುಂದಾಪುರ ನ್ಯಾಯಾಲಯದಲ್ಲಿ ಜಾಮೀನು ಪ್ರಕ್ರಿಯೆ ನಡೆಯಬೇಕಿದ್ದು, 2-3 ದಿನಗಳು ತಗಲುವ ಸಾಧ್ಯತೆಗಳಿವೆ. ಜೆಎಂಎಫ್ ಸಿ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಈ ಹಿಂದಿನ ವಿಚಾರಣೆಯಲ್ಲೂ ವಾದ ಮಂಡಿಸಿದ್ದು, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next