Advertisement

Rahul Gandhi: ಅಮ್ಮನಿಗೆ ರಾಗಾ ಅಚ್ಚರಿಯ ಉಡುಗೊರೆ

12:57 AM Oct 05, 2023 | Team Udayavani |

ಹೊಸದಿಲ್ಲಿ: ಶ್ವಾನ ಪ್ರೇಮಿಗಳಿಗೆ ಶ್ವಾನಗಳು ನೀಡುವಷ್ಟು ನೆಮ್ಮದಿ, ಖುಷಿ ಬಹುಶಃ ಬೇರೇನೂ ನೀಡ ಲಾಗದು. ಅಂಥ ಖುಷಿಯನ್ನು ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ವಿಶ್ವ ಪ್ರಾಣಿ ಅಭ್ಯುದಯ ದಿನದಂದು ಆ ವೀಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

Advertisement

ಗೋವಾದಿಂದ ಶ್ವಾನ ಒಂದನ್ನು ಖರೀದಿಸಿ ತಂದಿದ್ದ ರಾಹುಲ್‌ ಗಾಂಧಿ, ದಿಲ್ಲಿಯ ತಮ್ಮ ನಿವಾಸಕ್ಕೆ ಬರುತ್ತಿದ್ದಂತೆ, ನಾಯಿ ಮರಿಯನ್ನು ಗಿಫ್ಟ್ ಪ್ಯಾಕ್‌ ಮಾಡಿ ತಮ್ಮ ತಾಯಿಯ ಮುಂದಿಟ್ಟಿದ್ದಾರೆ. ಅದನ್ನು ತೆರೆಯುತ್ತಿದ್ದಂತೆ ಸೋನಿಯಾ ಗಾಂಧಿ ಸಂತಸದಿಂದ ನಾಯಿ ಮರಿಯನ್ನು ಎತ್ತಿಕೊಂಡು ಮುತ್ತಿಟ್ಟು ಸಂಭ್ರಮಿಸಿದ್ದಾರೆ. ನಾಯಿ ಮರಿಗೆ ನೂರಿ ಎಂದು ಹೆಸರಿಡಲಾಗಿದೆ. ಈ ವೀಡಿಯೋ ಬಗ್ಗೆ ನೆಟ್ಟಿಗರು ಬಹಳ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next