Advertisement
ಹೈದರಾಬಾದ್‌ನ ದಿಂಡಿಗಲ್‌ನ ವಾಯು ನೆಲೆಯಲ್ಲಿ ಮಾತನಾಡಿದ ಅವರು, “”ಜಗತ್ತಿನಾದ್ಯಂತ ಎರಡು ವರ್ಷ ಕೊರೊನಾ ನಿರ್ಬಂಧಗಳು ಜಾರಿಯಾಗಿದ್ದರಿಂದ ಕಳೆದ ವರ್ಷ ಹಾಗೂ ಈ ವರ್ಷ ಬರಬೇಕಿದ್ದ ರಫೇಲ್ ವಿಮಾನಗಳು ಸ್ವಲ್ಪ ತಡವಾಗಿ ಬರಬಹುದು. ಆದರೆ, ಉಳಿದೆಲ್ಲಾ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿದೆ. ಈಗಾಗಲೇ ನಿರ್ಧರಿಸುವ ಗಡುವಿಗೆ ಇದ್ಯಾವುದೂ ಬಾಧೆಯಾಗದು. 2022ರ ಹೊತ್ತಿಗೆ ಎಲ್ಲಾ 36 ರಫೇಲ್‌ಗಳೂ ಭಾರತಕ್ಕೆ ಸಿಗುವುದು ಖಂಡಿತ” ಎಂದು ತಿಳಿಸಿದ್ದಾರೆ.ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಗಡಿ ಬಿಕ್ಕಟ್ಟು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಸೇನಾ ಕಮಾಂಡರ್ ಮಟ್ಟದ ಮತ್ತೂಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಬದೌರಿಯಾ ತಿಳಿಸಿದ್ದಾರೆ.
ಶ್ರೀಲಂಕಾದ ಕೆಲವು ಬಂದರುಗಳನ್ನು ಅಭಿವೃದ್ಧಿಗೊಳಿಸುವ ಕೆಲವು ಯೋಜನೆಗಳನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಭಾರತೀಯ ನೌಕಾಪಡೆಯ ಉಪ ಅಡ್ಮಿರಲ್ ಅಶೋಕ್ ಕುಮಾರ್ ಹೇಳಿದ್ದಾರೆ. ಭಾರತದ ಸಾಗರೋತ್ತರ ಗಡಿಯನ್ನು ಸಂರಕ್ಷಿಸಲು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.