Advertisement
ಫ್ರಾನ್ಸ್‌ನ ಫೈಟರ್ ಜೆಟ್ ರಾಫೆಲ್ ಒಪ್ಪಂದದಡಿಯಲ್ಲಿ ಇದು ಎರಡನೇ ಪೂರೈಕೆಯಾಗಿದೆ. 5 ರಫೇಲ್ ವಿಮಾನಗಳ ಮೊದಲ ಬ್ಯಾಚ್ ಜುಲೈ 28 ರಂದು ಭಾರತವನ್ನು ತಲುಪಿತ್ತು. ಅನಂತರ ಸೆಪ್ಟೆಂಬರ್ 10ರಂದು ಅವರನ್ನು ವಾಯುಪಡೆಗೆ ಸೇರಿಸಲಾಯಿತು. ತನ್ನ ಎರಡನೇ ಬ್ಯಾಂಚ್‌ನಲ್ಲಿ ಕನಿಷ್ಠ 3 ರಫೇಲ್ ವಿಮಾನ ಬರಲಿದ್ದು, ಗರಿಷ್ಠ ಎಂದರೆ 4 ಬರುವ ಸಾಧ್ಯತೆ ಇದೆ.
Related Articles
Advertisement
36 ರಫೇಲ್ ಒಪ್ಪಂದಫ್ರಾನ್ಸ್ನೊಂದಿಗೆ ಭಾರತವು 2016 ರಲ್ಲಿ 58 ಸಾವಿರ ಕೋಟಿ ರೂಪಾಯಿಗಳ 36 ರಫೇಲ್ ಜೆಟ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಪೈಕಿ 18 ಅಂಬಾಲಾದಲ್ಲಿ ಮತ್ತು 18 ಬಂಗಾಲದ ಹಸಿಮರ ವಾಯುನೆಲೆಯಲ್ಲಿ ಇರಿಸಲಾಗುತ್ತದೆ. ಹಸಿಮರ ವಾಯುನೆಲೆ ಚೀನ ಮತ್ತು ಭೂತಾನ್ ಗಡಿಗೆ ಹತ್ತಿರದಲ್ಲಿದೆ. 2 ಎಂಜಿನ್ ಹೊಂದಿರುವ ರಾಫೆಲ್ ಫೈಟರ್ ಜೆಟ್ 2 ಪೈಲಟ್‌ಗಳಿಗೆ ಕುಳಿತುಕೊಳ್ಳಬಹುದು. ಈ ಜೆಟ್ ಒಂದು ನಿಮಿಷದಲ್ಲಿ 60 ಸಾವಿರ ಅಡಿ ಎತ್ತರವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಅವಳಿ ಎಂಜಿನ್, ಡೆಲ್ಟಾ-ವಿಂಗ್, ಅರೆ-ಸ್ಟೆಲ್ತ್ ಸಾಮರ್ಥ್ಯಗಳನ್ನು ಹೊಂದಿರುವ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಆಗಿದೆ. ರಾಫೆಲ್ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಅನ್ನು ಸಹ ಹೊಂದಿದ್ದು, ಇದು 100 ಕಿ.ಮೀ ವ್ಯಾಪ್ತಿಯಲ್ಲಿ ಗುರಿಯನ್ನು ಪತ್ತೆ ಮಾಡಲು ನೆರವಾಗುತ್ತದೆ.