Advertisement

Rafale ವಿಮಾನ ಖರೀದಿಯಲ್ಲಿ ಹಗರಣ ಅಡಗಿದೆ: ರಾಹುಲ್‌

06:52 PM Feb 06, 2018 | Team Udayavani |

ಹೊಸದಿಲ್ಲಿ : Rafale fighter ಜೆಟ್‌ಗಳ ಖರೀದಿ ಒಂದು ಹಗರಣವೇ ಆಗಿದೆ ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೋದಿ ಸರಕಾರ ಈ ಫೈಟರ್‌ ಜೆಟ್‌ ವಿಮಾನಗಳ ವಹಿವಾಟು ವಿವರಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

36 Rafale fighter ಜೆಟ್‌ ವಿಮಾನಗಳ ಖರೀದಿಗೆ ಭಾರತ ಮತ್ತು ಫ್ರಾನ್ಸ್‌ ಸರಕಾರ 2016ರ ಸೆಪ್ಟಂಬರ್‌ 23ರಂದು ಸಹಿ ಹಾಕಿವೆ. 

Rafale fighter ಜೆಟ್‌ ವಿಮಾನಗಳ ಖರೀದಿ ವಹಿವಾಟು ಭಾರತ ಮತ್ತು ಫ್ರಾನ್ಸ್‌ ಸರಕಾರಗಳ ನಡುವಿನ ಒಪ್ಪಂದವಾಗಿದ್ದು ಅದು ವರ್ಗೀಕೃತ ಮಾಹಿತಿಯಾಗಿರುವುದರಿಂದ ಅದನ್ನು ಬಹಿರಂಗಪಡಿಸಲಾಗದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಮಣನ್‌ ಅವರು ಹೇಳಿದ ಒಂದು ದಿನದ ತರುವಾಯ ರಾಹುಲ್‌ ಗಾಂಧಿ ಅವರಿಂದ ರಾಫೇಲ್‌ ವಹಿವಾಟಿನಲ್ಲಿ ಹಗರಣವೊಂದು ಅಡಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. 

“ರಕ್ಷಣಾ ಸಚಿವರು ಹೇಳುತ್ತಾರೆ ತಾನು Rafale fighters ವಿಮಾನ ಖರೀದಿ ವಹಿವಾಟಿನ ವಿವರ ಬಹಿರಂಗಪಡಿಸಲಾರೆ ಎಂದು. ಇದರರ್ಥ ಏನು ? ಹಾಗಿರುವಾಗ ಇದರಲ್ಲಿ ಹಗರಣ ಇದೆ ಎಂಬುದಷ್ಟೇ ಅರ್ಥವಾಗುತ್ತದೆ’ ಎಂದು ರಾಹುಲ್‌ ಗಾಂಧಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next