Advertisement

Rafale ಗುತ್ತಿಗೆ ಫ್ರಾನ್ಸ್‌ ಕಂಪೆನಿಯಿಂದ:ಅನಿಲ್‌ ರಿಲಯನ್ಸ್‌ ಹೇಳಿಕೆ

12:06 PM Aug 13, 2018 | Team Udayavani |

ಹೊಸದಿಲ್ಲಿ : ರಾಫೇಲ್‌ ಫೈಟರ್‌ ಜೆಟ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಈಗ ರಾಜಕೀಯ ಬಿರುಗಾಳಿಗೆ ಸಿಲುಕಿರುವ ಬಿಲಿಯಾಧಿಪತಿ ಉದ್ಯಮಿ, ರಿಲಯನ್ಸ್‌ ಸಮೂಹದ ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಡಿಫೆನ್ಸ್‌ ಕಂಪೆನಿ “ರಾಫೇಲ್‌ ಗುತ್ತಿಗೆ ತನಗೆ ರಕ್ಷಣಾ ಸಚಿವಾಲಯದಿಂದ ಸಿಕ್ಕಿದ್ದಲ್ಲ; ಫ್ರಾನ್‌ನ ಡಸ್ಸಾಲ್ಟ್ ಕಂಪೆನಿಯಿಂದ’ ಎಂದು ಸ್ಪಷ್ಟಪಡಿಸಿದೆ.

Advertisement

36 ರಾಫೇಲ್‌ ಫೈಟ್‌ರ್‌ ಜೆಟ್‌ಗಳನ್ನು ಪೂರೈಸಲಿರುವ ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯು ಗುತ್ತಿಗೆಯಲ್ಲಿನ ತನ್ನ ರಫ್ತು ಬಾಧ್ಯತೆಯನ್ನು ನಿರ್ವಹಿಸಲು ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಯನ್ನು ಆಯ್ಕೆ ಮಾಡಿತ್ತು. ಡಸ್ಸಾಲ್ಟ್ ಕಂಪೆನಿಯು ತನ್ನ ಭಾರತೀಯ ಪಾಲುದಾರರನ್ನು ಆಯ್ಕೆ ಮಾಡಿರುವುದರಲ್ಲಿ ರಕ್ಷಣಾ ಸಚಿವಾಲಯದ ಯಾವುದೇ ಪಾತ್ರ ಇಲ್ಲ  ಎಂದು ಅನಿಲ್‌ ಅಂಬಾನಿ ಕಂಪೆನಿ ಹೇಳಿದೆ. 

ಮಾಧ್ಯಮದೊಂದಿಗೆ ಮಾತನಾಡಿರುವ ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಸಿಇಓ ರಾಜೇಶ್‌ ಧಿಂಗ್ರಾ ಅವರು “ಸರಕಾರ-ಸರಕಾರ ನಡುವಿನ ಈ ವಹಿವಾಟಿನಲ್ಲಿ ಎಲ್ಲ 36 ಫೈಟರ್‌ ಜೆಟ್‌ಗಳನ್ನು ಹಾರಾಟ ಸನ್ನದ್ಧ ಸ್ಥಿತಿಯಲ್ಲಿ ಪೂರೈಸಬೇಕಾಗಿದೆ; ಎಂದರೆ ಇವುಗಳನ್ನು ಫ್ರಾನ್ಸ್‌ನ ಡಸ್ಸಾಲ್ಟ್ ಕಂಪೆನಿಯು ರಫ್ತು ಮಾಡಬೇಕಿದೆ. ಭಾರತದಲ್ಲಿ ಯಾವುದೇ ಫೈಟರ್‌ ಜೆಟ್‌ ನಿರ್ಮಾಣವಾಗದಿರುವ ಸರಳ ಕಾರಣಕ್ಕೆ ಎಚ್‌ಎಎಲ್‌ ಅಥವಾ ಬೇರೆ ಯಾರೂ ಉತ್ಪಾದನಾ ಏಜನ್ಸಿಯಾಗಲು ಸಾಧ್ಯವಿಲ್ಲ ‘ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next