Advertisement
ಏನಿದು ರಾಫಾ ಗಡಿ ? ಇಸ್ರೇಲ್ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವ ಗಾಜಾಪಟ್ಟಿಯಿಂದ ನಿರ್ಗಮಿಸಲು ಸದ್ಯಕ್ಕೆ ಉಳಿದಿರುವ ಏಕೈಕ ಮಾರ್ಗವೇ ರಾಫಾ ಗಡಿ! ಗಾಜಾದಲ್ಲಿ ಎರೆಜ್ ಹಾಗೂ ಕೆರಮ್ ಶಾಲೋಮ್ ಎಂಬ ಎರಡು ಮಾರ್ಗಗಳಿದ್ದು ಆ ಎರಡೂ ಮಾರ್ಗಗಳ ನಿರ್ಗಮನ ಇಸ್ರೇಲ್ ಮೂಲಕವೇ ಸಂಪರ್ಕಿಸುವುದರಿಂದ ಎರಡೂ ಮಾರ್ಗಗಳನ್ನು ಪ್ರಸಕ್ತ ಮುಚ್ಚಲಾಗಿದೆ.
ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ವೈಮಾನಿಕ ದಾಳಿಯು ರಾಷ್ಟ್ರದಲ್ಲಿ ಆಹಾಕಾರವನ್ನು ಸೃಷ್ಟಿಸಿದ್ದು, ಜನರಿಗೆ ಅಗತ್ಯವಿರುವ ವೈದ್ಯಕೀಯ, ಆಹಾರದಂಥ ಮಾನವೀಯ ನೆರವಿನ ಅಗತ್ಯವಿದೆ. ಆದರೆ, ವೈಮಾನಿಕ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಾನವೀಯ ನೆರವು ನೀಡಲೂ ಜನರು ಒಳಬರಲು ಸಾಧ್ಯವಾಗುತ್ತಿರಲಿಲ್ಲ. ಈಜಿಪ್ಟ್ನ ರಾಫಾ ಗಡಿ ತೆರೆದಿರುವುದರಿಂದ ನೆರವು ನೀಡುವವರು ಒಳಗೆ ಹಾಗೂ ದೇಶದಿಂದ ವಲಸೆ ಹೋಗುತ್ತಿರುವವರು ಹೊರ ಹೋಗಲು ಸಹಾಯಕವಾಗಿದೆ. ಏಕೈಕ ಸುರಕ್ಷತಾ ಮಾರ್ಗ
ಪಾಲೆಸ್ತೀನ್ ನಾಗರಿಕರಿಗೆ ಮಾನವೀಯ ನೆರವನ್ನು ಒದಗಿಸಲು ಅನುವು ಮಾಡಿಕೊಡುವಂತೆ ಈಜಿಪ್ಟ್ ಸರ್ಕಾರ ಇತ್ತೀಚೆಗಷ್ಟೇ ಇಸ್ರೇಲ್ ಅನ್ನು ಕೇಳಿಕೊಂಡಿತ್ತು. ಅದರಂತೆ ರಾಫಾ ಗಡಿ ಮಾರ್ಗದಲ್ಲಿ ಇಸ್ರೇಲ್ ದಾಳಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ಯಾಲೆಸ್ತೀನ್ ತೊರೆಯಲು ಇರುವ ಸುರಕ್ಷಿತ ಮಾರ್ಗ ರಾಫಾ ಮಾತ್ರ.