Advertisement

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

02:54 PM Sep 21, 2024 | Team Udayavani |

ಬೆಳಗಾವಿ: ರಾಜ್ಯದ ಹಲವೆಡೆ ಸದ್ದು ಮಾಡುತ್ತಿರುವ ಪ್ಯಾಲೆಸ್ತೀನ್ ಧ್ವಜ (Palestinian flag) ವಿವಾದ ಇದೀಗ ಬೆಳಗಾವಿಗೂ ಹಬ್ಬಿದೆ. ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್ ಅಳವಡಿಸಿದ್ದ ಘಟನೆ ಶನಿವಾರ (ಸೆ.21) ನಡೆದಿದೆ.

Advertisement

ನಗರದ ದರ್ಬಾರ್ ಗಲ್ಲಿಯಲ್ಲಿ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜ ಮಾದರಿಯ ಪೆಂಡಾಲ್ ಹಾಕಿದ್ದು, ಅದರ ಎದುರು ಖಡ್ಗದ ಮಾದರಿ ಕಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಠಾಣೆ ಪೊಲೀಸರು ಎಲ್ಲವನ್ನೂ ತೆರವುಗೊಳಿಸಿದರು.

ರವಿವಾರ (ಸೆ.22) ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಕೆಲ ಯುವಕರು ಪೆಂಡಾಲ್ ಅಳವಡಿಸಿದ್ದರು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next