Advertisement

ಪಾಕ್‌ ಪೈಲಟ್‌ಗಳಿಗೆ ರಫೇಲ್‌ ತರಬೇತಿ ಸುಳ್ಳು

12:29 AM Apr 12, 2019 | Team Udayavani |

ಹೊಸದಿಲ್ಲಿ: ಕತಾರ್‌ಗೆ ಒದಗಿಸಲಾದ ರಫೇಲ್‌ ಯುದ್ಧ ವಿಮಾನವನ್ನು ಮೊದಲು ಹಾರಾಟ ನಡೆಸಿದ್ದು ಪಾಕಿಸ್ಥಾನದ ಪೈಲಟ್‌ಗಳು ಎಂಬ ಸುದ್ದಿಯನ್ನು ಫ್ರಾನ್ಸ್‌ ತಳ್ಳಿಹಾಕಿದೆ. ಇದೊಂದು ಸುಳ್ಳು ಸುದ್ದಿ ಎಂಬುದಾಗಿ ಭಾರತಕ್ಕೆ ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡ್ರೆ ಝೀಗ್ಲೆರ್‌ ಹೇಳಿದ್ದಾರೆ.

Advertisement

ಕೆಲವೇ ದಿನಗಳ ಹಿಂದೆ ವೆಬ್‌ಸೈಟ್‌ ಒಂದರಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ, ಭಾರತ ಖರೀದಿಸುತ್ತಿರುವ ರಫೇಲ್‌ ಯುದ್ಧ ವಿಮಾನದ ಗೌಪ್ಯತೆ ಶತ್ರುದೇಶಗಳಿಗೆ ಗೊತ್ತಾಗಿದೆ ಎಂದು ಆರೋಪಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ
ಕತಾರ್‌ಗೆ ಡಸ್ಸಾಲ್ಟ್ ಕಂಪನಿ ರಫೇಲ್‌ ಯುದ್ಧ ವಿಮಾನಗಳನ್ನು ಹಸ್ತಾಂತರಿಸಿತ್ತು. ಇದಕ್ಕೂ ಮೊದಲು ಅಂದರೆ 2017ರಲ್ಲಿ ಮೊದಲ ಬ್ಯಾಚ್‌ನಲ್ಲಿ ಪಾಕಿಸ್ಥಾನದ ಪೈಲಟ್‌ಗಳಿಗೆ ಇದರಲ್ಲಿ ತರಬೇತಿ ನೀಡಲಾಗಿತ್ತು ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಕತಾರ್‌ ಹಾಗೂ ಪಾಕಿಸ್ಥಾನದ ಸೇನೆ ಮತ್ತು ರಕ್ಷಣಾ ಸಹಕಾರ ಉತ್ತಮವಾಗಿದ್ದು, ಇದೇ ಸಮಯದಲ್ಲಿ ಕತಾರ್‌ ಸೇನಾ ಮುಖ್ಯಸ್ಥರು ಪಾಕಿಸ್ಥಾನದ ಸೇನೆ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು. ಇದು ಈ ಸುದ್ದಿಗೆ ಇನ್ನಷ್ಟು ಪೂರಕವಾಗತ್ತು. ಆದರೆ ಈಗ ಇದು ಸುಳ್ಳು ಸುದ್ದಿ ಎಂದು ಫ್ರಾನ್ಸ್‌ ರಾಯಭಾರಿ ಖಚಿತಪಡಿಸುವ ಮೂಲಕ ಈ ವಿವಾದ ತಣ್ಣಗಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next