Advertisement

Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್‌ ಧನಾಗಮ ಯೋಗ

07:26 AM May 11, 2024 | Team Udayavani |

ಮೇಷ: ಕಳೆದ ದಿನಗಳ ಸಾಧನೆಗಳಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಉದ್ಯಮದ ನೌಕರರಿಗೆ ಹೆಚ್ಚು ಅನುಕೂಲ. ಮಹಿಳೆಯರ ಸೊÌàದ್ಯೋಗ ಯೋಜನೆಯಲ್ಲಿ ಲಾಭ.

Advertisement

ವೃಷಭ: ದೊಡ್ಡ ಪ್ರಮಾಣದ ಪ್ರಗತಿ ಸಂಭವ. ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದುವರಿಕೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ. ಗೃಹದಲ್ಲಿ ಸಂತೃಪ್ತಿ.

ಮಿಥುನ: ಧೈರ್ಯ, ಸಾಹಸದ ಪ್ರವೃತ್ತಿ ಕೊಂಚ ಕ್ಷೀಣಿಸಿದರೂ ಕಾರ್ಯದಲ್ಲಿ ಹಿಂದಿಲ್ಲ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಪ್ರಾಪ್ತಿ.ವ್ಯಾಪಾರಿಗಳಿಗೆ ಪೈಪೋಟಿಯಿಂದ ಮುಕ್ತಿ. ಮನೆಯಲ್ಲಿ ಸಂತೋಷದ ವಾತಾವರಣ.

ಕರ್ಕಾಟಕ: ಶೀಘ್ರ ಉತ್ಕರ್ಷ ಹೊಂದುವ ಆಕಾಂಕ್ಷೆ ಈಡೇರಿಕೆ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಕುಟುಂಬದ ಹಿರಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಎÇÉೆಯಿಲ್ಲದ ಉದ್ಯಮದ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಗೌರವ. ಕುಟುಂಬದ ಹಿತೈಷಿಯಿಂದ ಸಹಕಾರ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ.

ತುಲಾ: ಆಡಂಬರಕ್ಕೆ ತಲೆಬಾಗಬೇಡಿ. ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಹರ್ಷ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯಪಾಲನೆ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಿ ಗಳಿಗೆ ಎದುರಾಳಿಗಳ ಪೈಪೋಟಿ ನಿವಾರಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ.

ಧನು: ಸಂಪಾದನೆಯ ಮಾರ್ಗದಲ್ಲಿ ಮುಂದುವರಿಕೆ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕ ಲಾಭ ಗಳಿಕೆ. ಖಾದಿ ಉಡುಪು ಉತ್ಪಾದಕರಿಗೆ ಲಾಭ. ಜೇನು ಸಾಕಣೆ ಆರಂಭ.

ಮಕರ: ವೃತ್ತಿಯಲ್ಲಿ ಪರಿಣತಿ ಹೆಚ್ಚಿ ಆತ್ಮವಿಶ್ವಾಸ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ.

ಕುಂಭ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯ ಗಳು ಬಹುಪಾಲು ಮುಕ್ತಾಯ. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ ಸಾಮಗ್ರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಆಯೋಜಿತ ಸೇವಾ ಕಾರ್ಯಗಳಲ್ಲಿ ಭಾಗಿ.

ಮೀನ: ಸಪ್ತಾಹ ಮುಗಿಯುತ್ತಾ ಬಂದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಹಲವು ಬಗೆಯ ಸೇವೆಗಳ ಕಡೆಗೆ ಗಮನ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು.ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.

Advertisement

Udayavani is now on Telegram. Click here to join our channel and stay updated with the latest news.

Next