Advertisement

ರಫೇಲ್‌ ದಾಖಲೆ ಅಂಗೀಕಾರ

11:37 PM Apr 10, 2019 | mahesh |

ಹೊಸದಿಲ್ಲಿ: ಬಹುಕೋಟಿ ರೂ.ಮೌಲ್ಯದ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಸೋರಿಕೆ ಯಾಗಿರುವ ದಾಖಲೆಗಳನ್ನು ವಿಚಾರಣೆಗೆ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಅದನ್ನು ಪರಿಗಣಿಸ ಬಾರದು ಎಂದು ಕೇಂದ್ರ ಸರಕಾರ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ. ಈ ನಿಟ್ಟಿನಲ್ಲಿ ನ್ಯಾಯಪೀಠ ಎರಡು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಸೋರಿಕೆಯಾಗಿರುವ ದಾಖಲೆಗಳು ಭಾರತೀಯ ಸಾಕ್ಷ್ಯ ಕಾಯ್ದೆ ನಿಯಮ ಉಲ್ಲಂಘನೆ ಮತ್ತು ರಕ್ಷಣಾ ಇಲಾಖೆಯ ಅನುಮೋದನೆ ಇಲ್ಲದೆ ದಾಖಲೆಗಳನ್ನು ಪಡೆಯಲಾಗಿದೆ ಎಂಬ ಸರಕಾರ ಇದುವರೆಗೆ ಮಾಡುತ್ತಾ ಬಂದಿದ್ದ ವಾದಗಳನ್ನು ನ್ಯಾಯ ಪೀಠ ತಿರಸ್ಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ದಾಖಲೆಗಳನ್ನು ಹೊರಗಿಡಲಾಗಿದೆ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡುವಲ್ಲಿ ಕೇಂದ್ರ ವಿಫ‌ಲವಾಯಿತು.

Advertisement

ಡೀಲ್‌ ಬಗ್ಗೆ ತನಿಖೆಯಾಗಬೇಕೆಂದು ನ್ಯಾಯವಾದಿ ಪ್ರಶಾಂತ್‌ ಭೂಷಣ್‌, ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ ಸಿನ್ಹಾ ಮೇಲ್ಮನವಿ ಸಲ್ಲಿಸಿದ್ದರು. ವಿಪಕ್ಷಗಳು ಸುಪ್ರೀಂಕೋರ್ಟ್‌ ಆದೇಶವನ್ನು ಸ್ವಾಗತಿಸಿವೆ. ಅಮೇಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಚೌಕಿದಾರ ಕಳ್ಳ ಎನ್ನುವುದು ಈಗ ಸಾಬೀತಾಗಿದೆ. ಇದು ನ್ಯಾಯ ಸಂದ ದಿನ’ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಗೆ ಖಂಡಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ “ಇದೊಂದು ನ್ಯಾಯಾಂಗ ನಿಂದನೆ’ ಎಂದಿದ್ದಾರೆ. ಸೋರಿಕೆಯಾದ ದಾಖಲೆಗಳನ್ನು ಪರಿಗಣಿಸಬಹುದು ಎಂದಷ್ಟೇ ಕೋರ್ಟ್‌ ಹೇಳಿದೆ. ರಾಹುಲ್‌ ಕೋರ್ಟ್‌ ಆದೇಶದ ಅರ್ಧ ಭಾಗವನ್ನೂ ಓದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next