ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ನುಸುಳಿರುವ ತಪ್ಪಿನ ಬಗ್ಗೆ ಅಟಾರ್ನಿ ಜನರಲ್ ಹಾಗೂ ಮಹಾಲೇಖಪಾಲರನ್ನು ವಿಚಾರಣೆ ನಡೆಸುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರಕ್ಕೆ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನಿಸಿದಂತಾಗುತ್ತದೆ ಎಂದು ಕೆಲವು ಕಾಂಗ್ರೆಸ್ ಸದಸ್ಯರೂ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ರಫೇಲ್ ಒಪ್ಪಂದದ ಬೆಲೆ ವಿವರಗಳನ್ನು ಸಿಎಜಿಗೆ ನೀಡಲಾಗಿದ್ದು, ಸಿಎಜಿ ತನ್ನ ವರದಿ ಯನ್ನು ಪಿಎಸಿಗೆ ಸಲ್ಲಿಸಿದೆ. ಈ ಸಮಿತಿಯು ಸಂಸತ್ತಿ ನಲ್ಲಿ ವರದಿ ಮಂಡಿಸಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ. ಆದರೆ ವಾಸ್ತವದಲ್ಲಿ ಸಿಎಜಿ ತನ್ನ ವರದಿಯನ್ನು ಪಿಎಸಿಗೆ ಇನ್ನೂ ಸಲ್ಲಿಸಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಈ ಮಧ್ಯೆ ಇದು ವ್ಯಾಕರಣ ದೋಷವಾಗಿದ್ದು, ತೀರ್ಪು ಪರಿಷ್ಕರಿಸಬೇಕೆಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಅಟಾರ್ನಿ ಜನರಲ್ ಹಾಗೂ ಮಹಾಲೇಖ ಪಾಲ ರನ್ನು ಪಿಎಸಿ ಮುಖ್ಯಸ್ಥರಾಗಿರುವ ಖರ್ಗೆ ವೈಯಕ್ತಿಕ ನೆಲೆಯಲ್ಲಿ ಕರೆಸಿ ಪ್ರಶ್ನಿಸಬಹುದು. ಆದರೆ ಇದರ ವರದಿಯನ್ನು ಮಾನ್ಯ ಮಾಡ ಲಾಗು ವುದಿಲ್ಲ. ಅಲ್ಲದೆ, ಸಿಎಜಿ ವರದಿಯೇ ಇನ್ನೂ ಪಿಎಸಿಗೆ ಸಲ್ಲಿಕೆಯಾಗಿಲ್ಲದ್ದರಿಂದ ಅವ ರನ್ನು ಪ್ರಶ್ನಿಸಲು ಅನುಮತಿ ನೀಡಲಾಗದು ಎಂದು ಸದಸ್ಯರು ಹೇಳಿದ್ದಾರೆ.
ತೀರ್ಪು ವಾಪಸ್ ಪಡೆಯಲಿ: ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ವಾಪಸ್ ಪಡೆಯ ಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮತ್ತು ಮೋಸದ ಆರೋಪ ಹೊರಿಸಬೇಕು. ಇದರೊಂದಿಗೆ ಇಡೀ ಪ್ರಕರಣವನ್ನು ಪುನಃ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಆಗ್ರಹಿಸಿದ್ದಾರೆ. ಈ ವಿಚಾರ ವನ್ನು ಚರ್ಚೆ ಮಾಡಲು ಕೋರ್ಟ್ ಸೂಕ್ತ ವೇದಿಕೆಯಲ್ಲ. ಸಾರ್ವಜನಿಕ ಖಾತೆ ಸಮಿತಿಯು ಈ ವಿಚಾರವನ್ನು ಚರ್ಚೆ ನಡೆಸಬಹುದಾಗಿದೆ. ಸರ್ಕಾರ ತಪ್ಪು ಮಾಹಿತಿ ನೀಡಿದ್ದರಿಂದ ತೀರ್ಪಿನ ಮೇಲೆ ಪರಿಣಾಮ ಬೀರಿದೆ ಎಂದು ಶರ್ಮಾ ಹೇಳಿದ್ದಾರೆ. ಈ ನಡುವೆ, ರಫೇಲ್ ವಿವಾದವನ್ನು ಜಿಪಿಸಿ ತನಿಖೆಗೆ ವಹಿಸುವುದಿಲ್ಲ ಎಂದು ಸಚಿವ ಜೇಟಿÉ ಸ್ಪಷ್ಟಪಡಿಸಿದ್ದಾರೆ.