Advertisement
ತವರಲ್ಲೇ ನಡೆದ ನೆದರ್ಲೆಂಡ್ಸ್ ಎದುರಿನ ಡೇವಿಸ್ ಕಪ್ ಸರಣಿಯ ಕ್ವಾರ್ಟರ್ ಫೈನಲ್ನಲ್ಲಿ ನಡಾಲ್ ಅವರನ್ನು ವಿಶ್ವದ 80ನೇ ರ್ಯಾಂಕ್ ಆಟಗಾರ ಬೋಟಿಕ್ ವಾನ್ ಡೆ ಝಾಂಡ್ಸ್ಕಲ್ 6-4, 6-4 ನೇರ ಸೆಟ್ಗಳಲ್ಲಿ ಪರಾಭವಗೊಳಿಸಿದರು. ಇದರೊಂದಿಗೆ ಸ್ಪೇನ್ 1-2 ಅಂತರದ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿತು.
ಸೋಲಿನ ಬಳಿಕ ನಡಾಲ್ ಅತ್ಯಂತ ಭಾವುಕರಾಗಿ ವೀಕ್ಷಕರತ್ತ ಕೈ ಬೀಸತೊಡಗಿದರು. ಎಲ್ಲರೂ ಎದ್ದು ನಿಂತು ಈ ಮಹಾನ್ ಟೆನಿಸಿಗನಿಗೆ ಗೌರವ ಸಲ್ಲಿಸಿದರು. ಬಳಿಕ ತಮ್ಮ ವೃತ್ತಿ ಬದುಕಿನ ವೀಡಿಯೊ ಒಂದನ್ನು ಪ್ರದರ್ಶಿಸುವಾಗ ನಡಾಲ್ ಕಣ್ಣೀರಿಟ್ಟರು. “ನಾನು ಟೆನಿಸ್ ಆಡಿ ಆಯಾಸಗೊಂಡಿಲ್ಲ. ಆದರೆ ನನ್ನ ದೇಹ ಇನ್ನು ಆಡಲು ಬಯಸುವುದಿಲ್ಲ. ಈ ಪರಿಸ್ಥಿತಿಯನ್ನು ನಾನು ಒಪ್ಪಿಕೊಳ್ಳಲೇ ಬೇಕು. ನಿರೀಕ್ಷೆಗಿಂತಲೂ ಹೆಚ್ಚಿನ ಟೆನಿಸ್ ನಾನು ಆಡಿದ್ದೇನೆ. ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ನನ್ನ ಈ ಬದುಕಿಗೆ ಮತ್ತು ಇದರ ಹಿಂದಿರುವವರಿಗೆ ಕೃತಜ್ಞನಾಗಿದ್ದೇನೆ’ ಎಂಬುದಾಗಿ ನಡಾಲ್ ಹೇಳಿದರು.