Advertisement

ನಡಾಲ್‌ ಮದುವೆಯಾಗದಿರಲು ಕಾರಣವೇನು?

11:07 AM Jun 22, 2018 | Team Udayavani |

ಮ್ಯಾಡ್ರಿಡ್‌: ಟೆನಿಸ್‌ ಲೋಕದ ದಿಗ್ಗಜರೆಲ್ಲಾ ಸಂಸಾರಸ್ಥರಾಗಿ, ಮಕ್ಕಳ ತಂದೆಯರಾದರೆ ಹಿರಿಯ ಆಟಗಾರ ರಫಾಯೆಲ್‌ ನಡಾಲ್‌ ಮಾತ್ರ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದೇಕೆ? ಅದರಲ್ಲೂ, 12 ವರ್ಷಗಳಿಂದ ಮರಿಯಾ ಫ್ರಾನ್ಸಿಸ್ಕಾ ಎಂಬ ಯುವತಿಯೊಂದಿಗೆ ಪ್ರಣಯ ಪ್ರಸಂಗ ಹೊಂದಿದ್ದರೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಈಗ ಅವರೇ ಉತ್ತರಿಸಿದ್ದಾರೆ. “ನಮ್ಮದು ಸರಳ ಪ್ರೇಮಕಥನ. ಮರಿಯಾ ಸದ್ಯಕ್ಕೆ ತಮ್ಮ

Advertisement

ವೃತ್ತಿಜೀವನದಲ್ಲಿ ಮುಳುಗಿದ್ದಾರೆ. ತಾವು ಟೆನಿಸ್‌ ಸಾಧನೆಯಲ್ಲಿ ಮುಳುಗಿದ್ದೇನೆ. ಹಾಗಾಗಿ, ಮದುವೆ ಮುಂದಕ್ಕೆ ಹೋಗ್ತಿದೆ’ ಅನ್ನೋದು ಇವರು ನೀಡುವ ಕಾರಣ.

ಅದೇನೋ ಸರಿ. ಆದರೆ, ವಯಸ್ಸು ಕೇಳಬೇಕಲ್ಲ? “ಈ ವಯಸ್ಸಿನಲ್ಲಿ ನನಗೆ ಈಗಾಗಲೇ ಮಾಜಿ ಟೆನಿಸಿಗ ಎನಿಸಿದೆ. ಸಂಸಾರಸ್ಥ ಎಂದೇ ನಾನು ಭಾವಿಸಿದ್ದೇನೆ. ನಿವೃತ್ತಿಯಾದ ಮೇಲಷ್ಟೇ ಮದುವೆ ಮಕ್ಕಳ ಬಗ್ಗೆ ಯೋಚಿಸುತ್ತೇನೆ” ಎಂದು ನಡಾಲ್‌ ಉತ್ತರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next